ಆದಿಕಾಂಡ 22:8

ಅಬ್ರಹಾಮನು--ನನ್ನ ಮಗನೇ, ದೇವರು ತಾನೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿ ಸುವನು ಅಂದನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 22

6ಅಬ್ರಹಾಮನು ದಹನಬಲಿಯ ಕಟ್ಟಿಗೆಗಳನ್ನು ತಕ್ಕೊಂಡು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ ಬೆಂಕಿಯನ್ನೂ ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡು ಅವರಿಬ್ಬರೂ ಕೂಡಿಕೊಂಡು ಹೋದರು.

7ಆಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ--ನನ್ನ ತಂದೆಯೇ ಅಂದನು. ಆಗ ಅವನು--ನನ್ನ ಮಗನೇ, ಇದ್ದೇನೆ ಅಂದನು. ಅವನು--ಇಗೋ, ಬೆಂಕಿಯೂ ಕಟ್ಟಿಗೆಯೂ ಇವೆ, ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ ಅಂದನು.

8ಅಬ್ರಹಾಮನು--ನನ್ನ ಮಗನೇ, ದೇವರು ತಾನೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿ ಸುವನು ಅಂದನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು.

9ದೇವರು ಹೇಳಿದ ಸ್ಥಳಕ್ಕೆ ಅವರು ಬಂದಾಗ ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ ತನ್ನ ಮಗನಾದ ಇಸಾಕನನ್ನು ಕಟ್ಟಿ ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು.

10ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವದಕ್ಕೆ ಕತ್ತಿ ತೆಗೆದುಕೊಂಡನು.

ಆದಿಕಾಂಡ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी