ಅಪೊಸ್ತಲರ ಕೃತ್ಯಗಳು 1:11

ಅವರು--ಗಲಿಲಾಯದವರೇ, ನೀವು ಯಾಕೆ ಆಕಾಶದ ಕಡೆಗೆ ದೃಷ್ಟಿಸುತ್ತಾ ನಿಂತಿದ್ದೀರಿ? ನಿಮ್ಮಿಂದ ಪರಲೋಕಕ್ಕೆ ಎತ್ತಲ್ಪಟ್ಟ ಈ ಯೇಸುವು ಯಾವ ರೀತಿಯಿಂದ ಪರಲೋಕದೊಳಗೆ ಹೋಗಿರುವದನ್ನು ನೀವು ಕಂಡಿರೋ ಅದೇ ರೀತಿಯಲ್ಲಿ ಬರುವನು ಎಂದು ಹೇಳಿದರು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 1

9ಇವುಗಳನ್ನು ಹೇಳಿದ ಮೇಲೆ ಅವರು ನೋಡುತ್ತಿರುವಾಗ ಆತನು ಮೇಲಕ್ಕೆ ಎತ್ತಲ್ಪಟ್ಟನು; ಮೋಡವು ಅವರ ದೃಷ್ಟಿಗೆ ಮರೆಮಾಡಿ ಆತನನ್ನು ಸ್ವೀಕರಿಸಿತು.

10ಆತನು ಮೇಲಕ್ಕೆ ಹೋಗು ತ್ತಿರಲು ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಿರು ವಾಗ ಇಗೋ, ಬಿಳೀವಸ್ತ್ರಧಾರಿಗಳಾದ ಇಬ್ಬರು ಪುರುಷರು ಅವರ ಬಳಿಯಲ್ಲಿ ನಿಂತುಕೊಂಡರು.

11ಅವರು--ಗಲಿಲಾಯದವರೇ, ನೀವು ಯಾಕೆ ಆಕಾಶದ ಕಡೆಗೆ ದೃಷ್ಟಿಸುತ್ತಾ ನಿಂತಿದ್ದೀರಿ? ನಿಮ್ಮಿಂದ ಪರಲೋಕಕ್ಕೆ ಎತ್ತಲ್ಪಟ್ಟ ಈ ಯೇಸುವು ಯಾವ ರೀತಿಯಿಂದ ಪರಲೋಕದೊಳಗೆ ಹೋಗಿರುವದನ್ನು ನೀವು ಕಂಡಿರೋ ಅದೇ ರೀತಿಯಲ್ಲಿ ಬರುವನು ಎಂದು ಹೇಳಿದರು.

12ತರುವಾಯ ಅವರು ಯೆರೂಸಲೇಮಿ ನಿಂದ ಸಬ್ಬತ್‌ ದಿನದ ಪ್ರಯಾಣದಷ್ಟು ದೂರವಿದ್ದ ಎಣ್ಣೇಮರಗಳ ತೋಪು ಎಂದು ಕರೆಯಲ್ಪಟ್ಟ ಗುಡ್ಡ ದಿಂದ ಯೆರೂಸಲೇಮಿಗೆ ಹಿಂದಿರುಗಿದರು.

13ಪೇತ್ರ, ಯಾಕೋಬ, ಯೋಹಾನ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾ ಯನ ಮಗನಾದ ಯಾಕೋಬ, ಜೆಲೋತನೆಂಬ ಸೀಮೋನ ಮತ್ತು ಯಾಕೋಬನ ಸಹೋದರನಾದ ಯೂದಾ ಇವರು (ಪಟ್ಟಣದ) ಒಳಕ್ಕೆ ಬಂದು ತಾವು ಇರುತ್ತಿದ್ದ ಮೇಲಂತಸ್ತಿನ ಕೊಠಡಿಯೊಳಕ್ಕೆ ಹೋದರು.

ಅಪೊಸ್ತಲರ ಕೃತ್ಯಗಳು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी