೧ ಅರಸುಗಳು 11:7

ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷ್‌ಗೋಸ್ಕ ರವೂ ಅಮ್ಮೋನನ ಮಕ್ಕಳ ಅಸಹ್ಯಕರವಾದ ಮೋಲೆ ಕ್‌ನಿಗೋಸ್ಕರವೂ ಯೆರೂಸಲೇಮಿಗೆ ಎದುರಾಗಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 11

5ಸೊಲೊಮೋನನು ಚೀದೋನ್ಯರ ದೇವತೆಯಾದ ಅಷ್ಟೋರೆತನ್ನೂ ಅಮ್ಮೋ ನ್ಯರ ಅಸಹ್ಯಕರವಾದ ಮಿಲ್ಕೋಮನ್ನೂ ಹಿಂಬಾ ಲಿಸಿದನು.

6ಹೀಗೆಯೇ ಸೊಲೊಮೋನನು ತನ್ನ ತಂದೆಯಾದ ದಾವೀದನ ಹಾಗೆ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸದೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು.

7ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷ್‌ಗೋಸ್ಕ ರವೂ ಅಮ್ಮೋನನ ಮಕ್ಕಳ ಅಸಹ್ಯಕರವಾದ ಮೋಲೆ ಕ್‌ನಿಗೋಸ್ಕರವೂ ಯೆರೂಸಲೇಮಿಗೆ ಎದುರಾಗಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು.

8ಇದೇ ಪ್ರಕಾರ ತಮ್ಮ ದೇವರುಗಳಿಗೆ ಧೂಪವನ್ನು ಸುಟ್ಟು ಬಲಿಗಳನ್ನು ಅರ್ಪಿಸುವ ತನ್ನ ಅನ್ಯ ಜಾತಿಯ ಸಮಸ್ತ ಪತ್ನಿಯರಿಗೋಸ್ಕರವೂ ಕಟ್ಟಿಸಿದನು.

9ಆದಕಾರಣ ಸೊಲೊಮೋನನಿಗೆ ಎರಡು ಸಾರಿ ಪ್ರತ್ಯಕ್ಷನಾದ ಇಸ್ರಾಯೇಲಿನ ದೇವರಾದ ಕರ್ತನ ಕಡೆಯಿಂದ ಅವನ ಹೃದಯವು ತಿರುಗಿಹೋದದರಿಂದ ಕರ್ತನು ಅವನ ಮೇಲೆ ಕೋಪಿಸಿಕೊಂಡಿದ್ದನು.

೧ ಅರಸುಗಳು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी