ನೆಹೆಮಿಯ 2:6

ರಾಣಿಯು ತನ್ನ ಬಳಿಯಲ್ಲಿ ಕುಳಿತಿರುವಾಗ ಅರಸನು ನನಗೆ--ನಿನ್ನ ಪ್ರಯಾಣ ಎಷ್ಟು ದಿವಸ? ನೀನು ತಿರಿಗಿ ಯಾವಾಗ ಬರುತ್ತೀ ಅಂದನು. ಆಗ ಅರಸನು ನನ್ನನ್ನು ಕಳುಹಿಸಲು ಸಮ್ಮತಿ ಪಟ್ಟನು; ನಾನು ಅವನಿಗೆ ಸಮಯ ಗೊತ್ತು ಮಾಡಿ ದೆನು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 2

4ಅದಕ್ಕೆ ಅರಸನು ನನಗೆ--ನೀನು ಕೇಳುವದೇನು ಅಂದನು.

5ಆಗ ನಾನು ಪರಲೋಕದ ದೇವರಿಗೆ ಪ್ರಾರ್ಥನೆಮಾಡಿ ಅರಸನಿಗೆ--ಅರಸನು ಮೆಚ್ಚಿದರೆ ಮತ್ತು ನಿನ್ನ ಸೇವಕನಿಗೆ ನಿನ್ನ ಮುಂದೆ ದಯೆ ದೊರಕಿದರೆ ನೀನು ನನ್ನನ್ನು ನನ್ನ ತಂದೆಗಳ ಸಮಾಧಿಗಳಿರುವ ಪಟ್ಟಣವನ್ನು ಕಟ್ಟಿಸುವದಕ್ಕಾಗಿ ಯೆಹೂದಕ್ಕೆ ನನ್ನನ್ನು ಕಳುಹಿಸಬೇಕು ಅಂದೆನು.

6ರಾಣಿಯು ತನ್ನ ಬಳಿಯಲ್ಲಿ ಕುಳಿತಿರುವಾಗ ಅರಸನು ನನಗೆ--ನಿನ್ನ ಪ್ರಯಾಣ ಎಷ್ಟು ದಿವಸ? ನೀನು ತಿರಿಗಿ ಯಾವಾಗ ಬರುತ್ತೀ ಅಂದನು. ಆಗ ಅರಸನು ನನ್ನನ್ನು ಕಳುಹಿಸಲು ಸಮ್ಮತಿ ಪಟ್ಟನು; ನಾನು ಅವನಿಗೆ ಸಮಯ ಗೊತ್ತು ಮಾಡಿ ದೆನು.

7ಇದಲ್ಲದೆ ನಾನು ಅರಸನಿಗೆ--ಅರಸನಿಗೆ ಸಮ್ಮತಿಸಿದರೆ ನಾನು ಯೆಹೂದಕ್ಕೆ ಹೋಗಿ ಸೇರುವ ತನಕ ನದಿಯ ಆಚೆಯಲ್ಲಿ ಇರುವ ಅಧಿಪತಿಗಳು ನನ್ನನ್ನು ಸಾಗಕಳುಹಿಸುವ ಹಾಗೆ ಅವರಿಗೋಸ್ಕರ ನನಗೆ ಪತ್ರಗಳು ಕೊಡಲ್ಪಡಲಿ.

8ಇದಲ್ಲದೆ ಆಲಯದ ಸಂಬಂಧವಾದ ಅರಮನೆಯ ಬಾಗಲಿಗೋಸ್ಕರವೂ ಪಟ್ಟಣದ ಗೋಡೆಗೋಸ್ಕರವೂ ನಾನು ಪ್ರವೇಶಿಸುವ ಮನೆಗೋಸ್ಕರವೂ ತೊಲೆಗಳನ್ನು ಮಾಡಲು ಮರ ಗಳನ್ನು ಕೊಡುವ ಹಾಗೆ ಅರಸನವನಾಧಿಪತಿಯಾದ ಆಸಾಫನಿಗೋಸ್ಕರ ನನಗೆ ಪತ್ರ ಕೊಡಲ್ಪಡಲಿ ಅಂದೆನು. ಆಗ ದೇವರ ಒಳ್ಳೇ ಕೈ ನನ್ನ ಮೇಲೆ ಇರುವ ಪ್ರಕಾರ ಅರಸನು ನನಗೆ ಕೊಟ್ಟನು.

ನೆಹೆಮಿಯ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी