ಆದಿಕಾಂಡ 44:15

ಆಗ ಯೋಸೇಫನು ಅವರಿಗೆ--ನೀವು ಮಾಡಿದ ಈ ಕೆಲಸವೇನು? ನನ್ನಂಥ ಮನುಷ್ಯನು ದೈವೋಕ್ತಿ ಗಳನ್ನು ಬಲ್ಲೆನೆಂದು ನಿಮಗೆ ತಿಳಿದಿರಲಿಲ್ಲವೋ ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 44

13ಆಗ ಅವರು ತಮ್ಮ ವಸ್ತ್ರಗಳನ್ನು ಹರಿದುಕೊಂಡು ತಮ್ಮ ತಮ್ಮ ಕತ್ತೆಗಳ ಮೇಲೆ ಚೀಲಗಳನ್ನು ಹೇರಿಸಿ ಪಟ್ಟಣಕ್ಕೆ ಮರಳಿ ಬಂದರು.

14ಯೋಸೇಫನು ಇನ್ನು ಮನೆಯಲ್ಲಿದ್ದಾಗಲೇ ಯೆಹೂದನೂ ಅವನ ಸಹೋದ ರರೂ ಬಂದು ಅವನ ಮುಂದೆ ಅಡ್ಡಬಿದ್ದರು.

15ಆಗ ಯೋಸೇಫನು ಅವರಿಗೆ--ನೀವು ಮಾಡಿದ ಈ ಕೆಲಸವೇನು? ನನ್ನಂಥ ಮನುಷ್ಯನು ದೈವೋಕ್ತಿ ಗಳನ್ನು ಬಲ್ಲೆನೆಂದು ನಿಮಗೆ ತಿಳಿದಿರಲಿಲ್ಲವೋ ಅಂದನು.

16ಯೆಹೂದನು--ನಾವು ನಮ್ಮ ಒಡೆಯ ನಿಗೆ ಏನು ಹೇಳೋಣ? ಏನು ಮಾತನಾಡೋಣ? ಹೇಗೆ ನಮ್ಮನ್ನು ನಾವು ನಿರ್ದೋಷಿಗಳೆಂದು ತೋರಿಸಿ ಕೊಳ್ಳೋಣ? ನಿನ್ನ ದಾಸರ ಪಾಪವನ್ನು ದೇವರು ಕಂಡುಕೊಂಡಿದ್ದಾನೆ. ಇಗೋ, ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನೂ ನಾವೂ ನಮ್ಮ ಒಡೆಯ ನಿಗೆ ದಾಸರಾಗಿದ್ದೇವೆ ಅಂದನು.

17ಆಗ ಯೋಸೇ ಫನು--ಹಾಗೆ ಮಾಡುವದು ನನಗೆ ದೂರವಾಗಿರಿಲಿ. ಯಾರ ಬಳಿಯಲ್ಲಿ ಆ ಪಾತ್ರೆಯು ಸಿಕ್ಕಿತೋ ಅವನೇ ನನಗೆ ದಾಸನಾಗಿರಲಿ. ಆದರೆ ನೀವು ಸಮಾಧಾನವಾಗಿ ನಿಮ್ಮ ತಂದೆಯ ಬಳಿಗೆ ಹೋಗಿರಿ ಅಂದನು.

ಆದಿಕಾಂಡ 44 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी