ಯೆಹೆಜ್ಕೇಲನು 40:15

ಪ್ರವೇಶದ ಬಾಗಲಿನ ಮುಂದುಗಡೆ ಯಿಂದ ಒಳ ಬಾಗಲಿನ ದ್ವಾರದ ಅಂಗಳದ ವರೆಗೂ ಐವತ್ತು ಮೊಳವಿತ್ತು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 40

13ಆಗ ಅವನು ಬಾಗಲನ್ನು ಒಂದು ಕೊಠಡಿಯ ಮಾಳಿಗೆಯಿಂದ ಇನ್ನೊಂದು ಕೊಠಡಿಯ ಮಾಳಿಗೆಗೆ ಅಳೆದನು. ಆ ದ್ವಾರದಿಂದ ಈ ದ್ವಾರಕ್ಕೇರುವ ಅಗಲವು ಇಪ್ಪತ್ತೈದು ಮೊಳಗಳಾಗಿತ್ತು.

14ಕಂಬಗಳನ್ನು ಸಹ ಅರವತ್ತು ಮೊಳಗಳ ಹಾಗೆ ಮಾಡಿದನು; ಅದು ಬಾಗಲಿನ ಸುತ್ತಮುತ್ತಲಿರುವ (ಅಂಗಳದ) ಕಂಬದ ವರೆಗೂ ಇತ್ತು.

15ಪ್ರವೇಶದ ಬಾಗಲಿನ ಮುಂದುಗಡೆ ಯಿಂದ ಒಳ ಬಾಗಲಿನ ದ್ವಾರದ ಅಂಗಳದ ವರೆಗೂ ಐವತ್ತು ಮೊಳವಿತ್ತು.

16ಚಿಕ್ಕ ಕೊಠಡಿಗಳಲ್ಲಿಯೂ ಬಾಗಲಿನ ಒಳಗಡೆ ಇರುವ ಅವುಗಳ ಕಂಬಗಳಲ್ಲಿಯೂ ಇಕ್ಕಟ್ಟಾದ ಕಿಟಕಿಗಳಿದ್ದವು; ಕೈಸಾಲೆಗಳಿಗೂ ಸಹ ಒಳಗಡೆ ಸುತ್ತಲೂ ಕಿಟಕಿಗಳಿದ್ದವು; ಒಂದೊಂದು ಕಂಬದ ಮೇಲೆ ಖರ್ಜೂರದ ಮರಗಳಿದ್ದವು.

17ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ತಂದನು; ಇಗೋ, ಕೊಠಡಿಗಳೂ ಕಲ್ಲು ಹಾಸಿದ ನೆಲವೂ ಅಂಗಳದ ಸುತ್ತಲೂ ಮಾಡಲ್ಪಟ್ಟಿದ್ದವು; ಕಲ್ಲು ಹಾಸಿದ ನೆಲದ ಬದಿಯಲ್ಲಿ ಮೂವತ್ತು ಕೊಠಡಿ ಗಳಿದ್ದವು.

ಯೆಹೆಜ್ಕೇಲನು 40 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी