ನ್ಯಾಯಸ್ಥಾಪಕರು 21:3

ಇಸ್ರಾಯೇಲಿನ ದೇವರಾದ ಕರ್ತನೇ ಈಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರ ಕೊರತೆಯಾದ ದ್ದೇನು ಅಂದರು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 21

1ಆದರೆ ಇಸ್ರಾಯೇಲ್ಯರು ತಮ್ಮಲ್ಲಿ ಯಾವನೂ ತನ್ನ ಮಗಳನ್ನು ಬೆನ್ಯಾವಿಾನ್ಯ ರಿಗೆ ಮದುವೆಮಾಡಿಕೊಡುವದಿಲ್ಲ ಎಂದು ಮಿಚ್ಪೆಯಲ್ಲಿ ಆಣೆಇಟ್ಟರು.

2ಆದದರಿಂದ ಜನರು ದೇವರ ಮನೆಗೆ ಬಂದು ಅಲ್ಲಿ ದೇವರ ಮುಂದೆ ಸಾಯಂಕಾಲದ ವರೆಗೆ ಇದ್ದು ತಮ್ಮ ಸ್ವರವೆತ್ತಿ ಬಹಳವಾಗಿ ಅತ್ತು--

3ಇಸ್ರಾಯೇಲಿನ ದೇವರಾದ ಕರ್ತನೇ ಈಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರ ಕೊರತೆಯಾದ ದ್ದೇನು ಅಂದರು.

4ಜನರು ಮಾರನೇ ದಿವಸ ಉದಯ ದಲ್ಲಿ ಎದ್ದು, ಅಲ್ಲಿ ಬಲಿಪೀಠವನ್ನು ಕಟ್ಟಿ ದಹನಬಲಿ ಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿದರು.

5ಆದರೆ ಇಸ್ರಾಯೇಲ್‌ ಮಕ್ಕಳು--ಕರ್ತನ ಬಳಿಗೆ ಸಭೆಯೊಂದಿಗೆ ಇಸ್ರಾಯೇಲಿನ ಸಮಸ್ತ ಗೋತ್ರದಲ್ಲಿ ಬಾರದವರು ಯಾರು ಅಂದರು. ಯಾಕಂದರೆ ಕರ್ತನ ಬಳಿಗೆ ಮಿಚ್ಪೆಗೆ ಬಾರದವನು ಖಂಡಿತವಾಗಿ ಸಾಯಬೇಕೆಂದು ದೊಡ್ಡ ಆಣೆಇಟ್ಟುಕೊಂಡಿದ್ದರು.

ನ್ಯಾಯಸ್ಥಾಪಕರು 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी