ಅವನ ತಂದೆ ತಾಯಿಗಳು ಅವನನ್ನು ಹಿಡಿದು ಪಟ್ಟಣದ ಹಿರಿಯರ ಬಳಿಗೂ ಅವನ ಸ್ಥಳದ ಬಾಗಲಿನ ಬಳಿಗೂ ಹೊರಗೆ ತಂದು
17ಅವನು ಹಗೆ ಮಾಡಲ್ಪಟ್ಟ ವಳ ಮಗನಿಗೆ ತನ್ನ ಬಳಿಯಲ್ಲಿ ಉಂಟಾದ ಎಲ್ಲವುಗಳಲ್ಲಿ ಎರಡು ಪಾಲುಗಳನ್ನು ಕೊಟ್ಟು ಅವನೇ ಚೊಚ್ಚಲನೆಂದು ಒಪ್ಪಿಕೊಳ್ಳಬೇಕು. ಯಾಕಂದರೆ ಅವನೇ ಅವನ ಬಲದ ಆರಂಭವು; ಅವನಿಗೆ ಚೊಚ್ಚಲತನದ ಹಕ್ಕು ಉಂಟು.
18ಒಬ್ಬ ಮನುಷ್ಯನಿಗೆ ಮೊಂಡನೂ ತಿರುಗಿ ಬೀಳುವ ವನೂ ಆಗಿರುವ ಮಗನಿದ್ದರೆ ಅವನು ತಂದೆಯ ಮಾತನ್ನು ತಾಯಿಯ ಮಾತನ್ನು ಕೇಳದೆಯೂ, ಅವರು ಅವನನ್ನು ಶಿಕ್ಷಿಸಿ ಹೇಳುವ ಮಾತನ್ನೂ ಕೇಳದೆಯೂ ಹೋದರೆ
19ಅವನ ತಂದೆ ತಾಯಿಗಳು ಅವನನ್ನು ಹಿಡಿದು ಪಟ್ಟಣದ ಹಿರಿಯರ ಬಳಿಗೂ ಅವನ ಸ್ಥಳದ ಬಾಗಲಿನ ಬಳಿಗೂ ಹೊರಗೆ ತಂದು
20ಪಟ್ಟಣದ ಹಿರಿಯರಿಗೆ--ಈ ನಮ್ಮ ಮಗನು ಮೊಂಡನೂ ತಿರುಗಿ ಬೀಳುವವನೂ ನಮ್ಮ ಮಾತು ಕೇಳದವನೂ ಹೊಟ್ಟೇ ಬಾಕನೂ ಕುಡಿಯುವವನೂ ಆಗಿದ್ದಾನೆ ಎಂದು ಹೇಳಬೇಕು.
21ಆಗ ಅವನ ಪಟ್ಟಣದ ಜನರೆಲ್ಲರು ಅವನು ಸಾಯುವಹಾಗೆ ಅವನನ್ನು ಕಲ್ಲೆಸೆಯಬೇಕು; ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕ ಬೇಕು; ಇಸ್ರಾಯೇಲ್ಯರಲ್ಲಿ ಇದನ್ನು ಕೇಳಿ ಭಯ ಪಡುವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ