ಆದಿಕಾಂಡ 2:7

ಕರ್ತನಾದ ದೇವರು ಭೂಮಿಯ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸ ವನ್ನು ಊದಿದನು; ಆಗ ಮನುಷ್ಯನು ಜೀವಾತ್ಮ ನಾದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 2

5ಕರ್ತನಾದ ದೇವರು ಭೂಮಿಯನ್ನೂ ಆಕಾಶಗಳನ್ನೂ ಉಂಟು ಮಾಡಿದ ದಿನದಲ್ಲಿ ಹೊಲದ ಯಾವ ಗಿಡವಾದರೂ ಭೂಮಿಯಲ್ಲಿ ಇನ್ನೂ ಬೆಳೆದಿರಲಿಲ್ಲ; ಹೊಲದ ಯಾವ ಪಲ್ಯವಾದರೂ ಇನ್ನೂ ಮೊಳೆತಿರಲಿಲ್ಲ; ಯಾಕಂದರೆ ಕರ್ತನಾದ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ; ಭೂಮಿಯನ್ನು ವ್ಯವಸಾಯ ಮಾಡು ವದಕ್ಕೆ ಮನುಷ್ಯನು ಇರಲಿಲ್ಲ.

6ಆದರೆ ಭೂಮಿ ಯೊಳಗಿಂದ ಮಂಜು ಏರಿಬಂದು ನೆಲವನ್ನೆಲ್ಲಾ ತೋಯಿಸುತ್ತಿತ್ತು.

7ಕರ್ತನಾದ ದೇವರು ಭೂಮಿಯ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸ ವನ್ನು ಊದಿದನು; ಆಗ ಮನುಷ್ಯನು ಜೀವಾತ್ಮ ನಾದನು.

8ಕರ್ತನಾದ ದೇವರು ಏದೆನಿನಲ್ಲಿ ಪೂರ್ವ ದಿಕ್ಕಿಗೆ ತೋಟವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇಟ್ಟನು.

9ಕರ್ತನಾದ ದೇವರು ನೋಟಕ್ಕೆ ರಮ್ಯವಾದ ಮತ್ತು ಊಟಕ್ಕೆ ಒಳ್ಳೇದಾದ ಎಲ್ಲಾ ಮರಗಳನ್ನು, ತೋಟದ ಮಧ್ಯದಲ್ಲಿ ಜೀವದ ಮರವನ್ನು, ಒಳ್ಳೇದರ ಕೆಟ್ಟದರ ತಿಳುವಳಿಕೆಯ ಮರವನ್ನು ಭೂಮಿಯೊಳಗಿಂದ ಬೆಳೆಯಿಸಿದನು.

ಆದಿಕಾಂಡ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी