ಕೀರ್ತನೆಗಳು 141:3

ಓ ಕರ್ತನೇ, ನನ್ನ ಬಾಯಿಗೆ ಕಾವ ಲಿಡು; ನನ್ನ ತುಟಿಗಳ ಕದವನ್ನು ಕಾಯಿ. ಅಪರಾಧ ಮಾಡುವ ಮನುಷ್ಯರ ಸಂಗಡ ದುಷ್ಟತ್ವದಿಂದ ಕರ್ಮಗಳನ್ನು ನಡಿಸುವ ಕೆಟ್ಟ ಕಾರ್ಯಕ್ಕೆ

ಸಂದರ್ಭದೊಂದಿಗೆ ಓದಿ · ಕೀರ್ತನೆಗಳು 141

1ಕರ್ತನೇ, ನಿನ್ನನ್ನು ಕೂಗುತ್ತೇನೆ; ನನ್ನ ಬಳಿಗೆ ಬರಲು ತ್ವರೆಯಾಗಿ ಬಾ; ನಾನು ನಿನ್ನನ್ನು ಕರೆಯುವಾಗ, ನನ್ನ ಸ್ವರಕ್ಕೆ ಕಿವಿಗೊಡು.

2ನನ್ನ ಪ್ರಾರ್ಥನೆ ನಿನ್ನ ಮುಂದೆ ಧೂಪವಾಗಿಯೂ ನನ್ನ ಕೈ ಎತ್ತುವದು ಸಾಯಂಕಾಲದ ಬಲಿಯಾಗಿಯೂ ಸಿದ್ಧವಾಗಿರಲಿ.

3ಓ ಕರ್ತನೇ, ನನ್ನ ಬಾಯಿಗೆ ಕಾವ ಲಿಡು; ನನ್ನ ತುಟಿಗಳ ಕದವನ್ನು ಕಾಯಿ. ಅಪರಾಧ ಮಾಡುವ ಮನುಷ್ಯರ ಸಂಗಡ ದುಷ್ಟತ್ವದಿಂದ ಕರ್ಮಗಳನ್ನು ನಡಿಸುವ ಕೆಟ್ಟ ಕಾರ್ಯಕ್ಕೆ

4ನನ್ನ ಹೃದಯವನ್ನು ಲಾಲಿಸದೆ ಮಾಡು; ಅವರ ಸವಿ ಊಟಗಳನ್ನು ನಾನು ಉಣ್ಣುವದಿಲ್ಲ.

5ನೀತಿವಂತನು ನನ್ನನ್ನು ಹೊಡೆಯಲಿ; ಅದು ಕರುಣೆಯೇ; ಅವನು ನನ್ನನ್ನು ಗದರಿಸಲಿ; ಅದು ನನ್ನ ತಲೆಗೆ ಶ್ರೇಷ್ಠ ಎಣ್ಣೆಯೇ. ಅದನ್ನು ನನ್ನ ತಲೆ ಬೇಡವೆನ್ನದಿರಲಿ; ಆದರೆ ಇನ್ನೂ ಅವರ ಕೇಡುಗಳಲ್ಲಿ ನನ್ನ ಪ್ರಾರ್ಥನೆ ಇರುವದು.

ಕೀರ್ತನೆಗಳು 141 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी