ಧರ್ಮೋಪದೇಶಕಾಂಡ 4:34

ಇಲ್ಲವೆ ನಿಮ್ಮ ದೇವರಾದ ಕರ್ತನು ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆ ನಿಮಗೆ ಮಾಡಿದ್ದೆಲ್ಲಾದರ ಹಾಗೆ ಬೇರೆ ದೇವರು ಹೋಗಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮಧ್ಯ ದಿಂದ ಶೋಧನೆಗಳು ಗುರುತುಗಳು ಅದ್ಭುತಗಳು ಇವುಗಳ ಮೂಲಕವಾಗಿಯೂ ಯುದ್ಧದಿಂದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾಭೀತಿಯಿಂದಲೂ ತಕ್ಕೊಳ್ಳುವದಕ್ಕೆ ಪ್ರಯತ್ನ ಮಾಡಿದನೋ?

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 4

32ನಿನ್ನ ಮುಂದೆ ಇದ್ದ ಪೂರ್ವದ ದಿವಸಗಳನ್ನು ದೇವರು ಭೂಮಿಯ ಮೇಲೆ ಮನುಷ್ಯನನ್ನು ಸೃಷ್ಟಿಸಿ ದಂದಿನಿಂದ ವಿಚಾರಿಸು; ಆಕಾಶದ ಈ ಕಡೆಯಿಂದ ಆ ಕಡೆಯವರೆಗೂ ವಿಚಾರಿಸು; ಇದರಂತೆ ದೊಡ್ಡ ಕಾರ್ಯ ಉಂಟಾಯಿತೇ? ಇಲ್ಲವೆ ಇದರಂತೆ ಕೇಳ ಲ್ಪಟ್ಟಿತೇ?

33ನೀನು ಕೇಳಿದಂತೆ ಬೆಂಕಿಯೊಳಗಿಂದ ಮಾತನಾಡುವ ದೇವರ ಶಬ್ದವನ್ನು ಕೇಳಿ ಬದುಕಿದ ಜನರು ಇದ್ದಾರೆಯೇ ?

34ಇಲ್ಲವೆ ನಿಮ್ಮ ದೇವರಾದ ಕರ್ತನು ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆ ನಿಮಗೆ ಮಾಡಿದ್ದೆಲ್ಲಾದರ ಹಾಗೆ ಬೇರೆ ದೇವರು ಹೋಗಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮಧ್ಯ ದಿಂದ ಶೋಧನೆಗಳು ಗುರುತುಗಳು ಅದ್ಭುತಗಳು ಇವುಗಳ ಮೂಲಕವಾಗಿಯೂ ಯುದ್ಧದಿಂದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾಭೀತಿಯಿಂದಲೂ ತಕ್ಕೊಳ್ಳುವದಕ್ಕೆ ಪ್ರಯತ್ನ ಮಾಡಿದನೋ?

35ಕರ್ತನೇ ದೇವರೆಂದು ನೀನು ತಿಳುಕೊಳ್ಳುವ ಹಾಗೆ ಅವು ನಿನಗೆ ತೋರಿಸಲ್ಪಟ್ಟವು; ಆತನಲ್ಲದೆ ಮತ್ತೊಬ್ಬನಿಲ್ಲ.

36ಆತನು ನಿನ್ನ ಶಿಕ್ಷಣಕ್ಕಾಗಿ ಆಕಾಶದೊಳಗಿಂದ ತನ್ನ ಶಬ್ದವನ್ನು ನಿನಗೆ ಕೇಳ ಮಾಡಿದನು; ಭೂಮಿಯ ಮೇಲೆ ತನ್ನ ಮಹಾಅಗ್ನಿ ಯನ್ನು ನಿನಗೆ ತೋರಿಸಿದನು; ಬೆಂಕಿಯೊಳಗಿಂದ ಆತನ ಮಾತುಗಳನ್ನು ಕೇಳಿದಿ.

ಧರ್ಮೋಪದೇಶಕಾಂಡ 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी