೧ ಕೊರಿಂಥದವರಿಗೆ 4:6

ಸಹೋದರರೇ, ನಾನು ನಿಮಗೋಸ್ಕರವೇ ಸಾಮ್ಯರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ; ಬರೆದಿರುವದನ್ನು ನೀವು ವಿಾರಿಹೋಗದೆ ನಿಮ್ಮಲ್ಲಿ ಯಾರೂ ಒಬ್ಬನಿಗೆ ವಿರೋಧವಾಗಿ ಮತ್ತೊಬ್ಬನು ಉಬ್ಬಿಕೊಳ್ಳಬಾರದೆಂಬದನ್ನು ನಮ್ಮಲ್ಲಿ ಕಲಿತುಕೊಳ್ಳ ಬೇಕು.

ಸಂದರ್ಭದೊಂದಿಗೆ ಓದಿ · ೧ ಕೊರಿಂಥದವರಿಗೆ 4

4ನಾನೇ ನಾನಾಗಿ ಏನೂ ತಿಳಿಯದವನಾಗಿದ್ದೇನೆ; ಆದಾಗ್ಯೂ ಅದರಿಂದ ನಾನು ನೀತಿವಂತನಾಗಲಿಲ್ಲ; ನನ್ನನ್ನು ವಿಚಾರಿಸುವಾತನು ಕರ್ತನೇ.

5ಆದದರಿಂದ ಕಾಲಕ್ಕೆ ಮೊದಲು ಕರ್ತನು ಬರುವತನಕ ಯಾವದನ್ನೂ ಕುರಿತು ತೀರ್ಪು ಮಾಡಬೇಡಿರಿ; ಆತನು ಕತ್ತಲೆಯ ಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು; ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವ ರಿಂದ ಬರುವದು.

6ಸಹೋದರರೇ, ನಾನು ನಿಮಗೋಸ್ಕರವೇ ಸಾಮ್ಯರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ; ಬರೆದಿರುವದನ್ನು ನೀವು ವಿಾರಿಹೋಗದೆ ನಿಮ್ಮಲ್ಲಿ ಯಾರೂ ಒಬ್ಬನಿಗೆ ವಿರೋಧವಾಗಿ ಮತ್ತೊಬ್ಬನು ಉಬ್ಬಿಕೊಳ್ಳಬಾರದೆಂಬದನ್ನು ನಮ್ಮಲ್ಲಿ ಕಲಿತುಕೊಳ್ಳ ಬೇಕು.

7ನಿನಗೂ ಇತರರಿಗೂ ತಾರತಮ್ಯ ಮಾಡಿ ದವರು ಯಾರು? ನೀನು ಹೊಂದದೆ ಇರುವಂಥದ್ದು ನಿನ್ನಲ್ಲಿ ಯಾವದು ಇದೆ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ?

8ಈಗಾಗಲೇ ನೀವು ತೃಪ್ತರಾದಿರಿ, ಈಗಾಗಲೇ ಐಶ್ವರ್ಯವಂತರಾದಿರಿ, ನಾವಿಲ್ಲದೆ ನೀವು ಅರಸರಂತೆ ಆಳಿದಿರಿ; ನೀವು ಆಳುವಂತೆ ದೇವರು ಮಾಡಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಆಗ ನಾವು ಸಹ ನಿಮ್ಮೊಂದಿಗೆ ಆಳುತ್ತಿದ್ದೆವು.

೧ ಕೊರಿಂಥದವರಿಗೆ 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी