ಆದಿಕಾಂಡ 42:31

ನಾವು ಅವ ನಿಗೆ--ನಾವು ಗೂಢಚಾರರಲ್ಲ, ಸತ್ಯವಂತರೇ.

ಸಂದರ್ಭದೊಂದಿಗೆ ಓದಿ · ಆದಿಕಾಂಡ 42

29ಅವರು ಕಾನಾನ್‌ ದೇಶಕ್ಕೆ ತಮ್ಮ ತಂದೆಯಾದ ಯಾಕೋಬನ ಬಳಿಗೆ ಬಂದು ತಮಗೆ ಸಂಭವಿಸಿದ್ದೆಲ್ಲ ವನ್ನು ಅವನಿಗೆ ತಿಳಿಸಿದರು. ಅದೇನಂದರೆ--

30ಆ ದೇಶದ ಪ್ರಭುವಾಗಿರುವ ಮನುಷ್ಯನು ನಮ್ಮ ಸಂಗಡ ಕಠಿಣವಾಗಿ ಮಾತನಾಡಿ ಗೂಢಚಾರ ರನ್ನಾಗಿ ನಮ್ಮನ್ನು ಎಣಿಸಿದನು.

31ನಾವು ಅವ ನಿಗೆ--ನಾವು ಗೂಢಚಾರರಲ್ಲ, ಸತ್ಯವಂತರೇ.

32ನಾವು ಒಬ್ಬನೇ ತಂದೆಗೆ ಹುಟ್ಟಿದ ಹನ್ನೆರಡು ಮಂದಿ ಸಹೋದರರಾಗಿದ್ದೇವೆ; ಒಬ್ಬನು ಇಲ್ಲ; ಚಿಕ್ಕವನು ಇಂದು ನಮ್ಮ ತಂದೆಯ ಸಂಗಡ ಕಾನಾನ್‌ ದೇಶದಲ್ಲಿ ಇದ್ದಾನೆ ಅಂದೆವು.

33ಆಗ ದೇಶದ ಪ್ರಭುವಾಗಿರುವ ಆ ಮನುಷ್ಯನು--ನೀವು ಯಥಾರ್ಥರೆಂದು ನಾನು ಇದರ ಮೂಲಕ ತಿಳುಕೊಳ್ಳುವೆನು. ನೀವು ನಿಮ್ಮ ಸಹೋದರರಲ್ಲಿ ಒಬ್ಬನನ್ನು ನನ್ನ ಬಳಿಯಲ್ಲಿಟ್ಟು ನಿಮ್ಮ ಮನೆಯ ಕ್ಷಾಮಕ್ಕೆ ಅವಶ್ಯವಾದದ್ದನ್ನು ತಕ್ಕೊಂಡುಹೋಗಿರಿ.

ಆದಿಕಾಂಡ 42 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी