ಯೆಹೆಜ್ಕೇಲನು 33:31

ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 33

29ಆಮೇಲೆ ಅವರು ಮಾಡಿದ ಎಲ್ಲಾ ಅಸಹ್ಯಗ ಳಿಂದಾಗಿ ನಾನು ಆ ದೇಶವನ್ನು ಸಂಪೂರ್ಣವಾಗಿ ನಾಶಗೊಳಿಸಿದಾಗ ನಾನೇ ಕರ್ತನೆಂದು ಅವರು ತಿಳಿಯುವರು.

30ಇದಲ್ಲದೆ ಮನುಷ್ಯಪುತ್ರನೇ, ನಿನ್ನ ಜನರ ಮಕ್ಕಳು ಇನ್ನು ಮನೆಗಳ ಬಾಗಲುಗಳಿಗೂ ಗೋಡೆಗಳಿಗೂ ವಿರುದ್ಧವಾಗಿ ಮಾತನಾಡುತ್ತಾರೆ, ನಿನ್ನ ವಿಷಯವಾಗಿ ಮಾತನಾಡಿಕೊಂಡು ಒಬ್ಬರಿಗೊಬ್ಬರು ತಮ್ಮ ತಮ್ಮ ಸಹೋದರರೆಲ್ಲರೂ--ಕರ್ತನಿಂದ ಹೊರಡುವ ಮಾತು ಏನೆಂದು ಕೇಳಿ ಪ್ರಾರ್ಥಿಸೋಣ ಬನ್ನಿ ಎಂದು ಹೇಳಿಕೊಳ್ಳುತ್ತಾರೆ.

31ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.

32ಇಗೋ, ನೀನು ಅವರಿಗೆ ಇಂಪಾದ ಶಬ್ದವುಳ್ಳಂತ, ತಂತಿವಾದ್ಯಗಳನ್ನು ಚೆನ್ನಾಗಿ ಬಾರಿಸುವಂತ ಒಬ್ಬನ ಮನೋಹರವಾದ ರಾಗದ ಹಾಗಿರುವಿ; ಅವರು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಅವುಗಳನ್ನು ಮಾಡುವದಿಲ್ಲ.

33ಯಾವಾಗ ಇದು ಬರುತ್ತದೋ ಆಗ ಅವರಿಗೆ ಪ್ರವಾದಿಯು ತಮ್ಮ ಸಂಗಡ ಇದ್ದಾನೆಂದು ತಿಳಿಯುವದು.

ಯೆಹೆಜ್ಕೇಲನು 33 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी