ಆದರೆ ಇಗೋ, ಅರಸನಾಗಿರುವ ನನ್ನ ಒಡೆಯ ನಾದ ನೀನು ಅರಿಯದೆ ಇರುವಾಗ ಅದೋನೀಯನು ಆಳುತ್ತಾನೆ.
16ಅರ ಸನು ಅತಿವೃದ್ಧನಾಗಿರುವದರಿಂದ ಶೂನೇಮ್ಯಳಾದ ಅಬೀಷಗ್ಳು ಅರಸನಿಗೆ ಸೇವೆಮಾಡುತ್ತಾ ಇದ್ದಳು. ಬತ್ಷೆಬೆಳು ಬಾಗಿ ಅರಸನಿಗೆ ವಂದನೆ ಮಾಡಿದಳು. ಅರಸನು--ನಿನಗೇನು ಬೇಕು ಅಂದನು.
17ಆಕೆಯು ಅವನಿಗೆ--ನನ್ನ ಒಡೆಯನೇ, ನಿಶ್ಚಯವಾಗಿ ನಿನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನೀನು ನಿನ್ನ ದಾಸಿಗೆ ನಿನ್ನ ದೇವರಾದ ಕರ್ತನ ಹೆಸರಿನಲ್ಲಿ ಪ್ರಮಾಣಮಾಡಿದಿ.
18ಆದರೆ ಇಗೋ, ಅರಸನಾಗಿರುವ ನನ್ನ ಒಡೆಯ ನಾದ ನೀನು ಅರಿಯದೆ ಇರುವಾಗ ಅದೋನೀಯನು ಆಳುತ್ತಾನೆ.
19ಇದಲ್ಲದೆ ಅವನು ಬಹಳ ಎತ್ತುಗಳನ್ನೂ ಕೊಬ್ಬಿದ ಪಶುಗಳನ್ನೂ ಕುರಿಗಳನ್ನೂ ಕೊಲ್ಲಿಸಿ ಅರಸನ ಮಕ್ಕಳೆಲ್ಲರನ್ನೂ ಯಾಜಕನಾದ ಎಬ್ಯಾತಾರನನ್ನೂ ಸೈನ್ಯಾಧಿಪತಿಯಾದ ಯೋವಾಬನನ್ನೂ ಕರೆದಿದ್ದಾನೆ.
20ಆದರೆ ನಿನ್ನ ಸೇವಕನಾದ ಸೊಲೊಮೋನನನ್ನು ಅವನು ಕರೆಯಲಿಲ್ಲ. ಆದದರಿಂದ ಅರಸನಾದ ನನ್ನ ಒಡೆಯನೇ, ನಿನ್ನ ತರುವಾಯ ನನ್ನ ಒಡೆಯನಾದ ಅರಸನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನಾ ರೆಂದು ನೀನು ಹೇಳುವ ಹಾಗೆ ಸಮಸ್ತ ಇಸ್ರಾಯೇಲ್ಯರ ಕಣ್ಣುಗಳು ನಿನ್ನ ಮೇಲೆ ಇರುತ್ತವೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ