ಯೆರೆಮಿಯ 42:20

ನಮಗೋಸ್ಕರ ನಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡೆಂದೂ ನಮ್ಮ ದೇವರಾದ ಕರ್ತನು ಏನೇನು ಹೇಳುವನೋ ಅದನ್ನು ನಮಗೆ ತಿಳಿಸು, ಆಗ ನಾವು ಮಾಡುವೆವೆಂದೂ ಹೇಳಿ, ನನ್ನನ್ನು ನಿಮ್ಮ ದೇವರಾದ ಕರ್ತನ ಬಳಿಗೆ ಕಳುಹಿಸಿದಿರಿ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 42

18ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕೋಪವೂ ನನ್ನ ಉರಿಯೂ ಹೇಗೆ ಯೆರೂಸಲೇಮಿನ ನಿವಾಸಿಗಳ ಮೇಲೆ ಹೊಯ್ಯಲ್ಪಟ್ಟಿತೋ ಹಾಗೆಯೇ ನೀವು ಐಗುಪ್ತಕ್ಕೆ ಹೋದರೆ ನನ್ನ ಉರಿಯು ನಿಮ್ಮ ಮೇಲೆ ಹೊಯ್ಯಲ್ಪ ಡುವದು; ನೀವು ಅಸಹ್ಯವೂ ವಿಸ್ಮಯವೂ ಶಾಪವೂ ನಿಂದೆಯೂ ಆಗುವಿರಿ; ಈ ಸ್ಥಳವನ್ನು ನೀವು ತಿರುಗಿ ನೋಡುವದಿಲ್ಲ.

19ಯೆಹೂದದ ಶೇಷವೇ, ಕರ್ತನು ನಿಮ್ಮ ವಿಷಯ ಹೇಳಿದ್ದೇನಂದರೆ--ಐಗುಪ್ತಕ್ಕೆ ಹೋಗ ಬೇಡಿರಿ; ನಾನು ಈ ಹೊತ್ತು ನಿಮಗೆ ಸಾಕ್ಷಿ ಕೊಟ್ಟಿದ್ದೇ ನೆಂದು ಚೆನ್ನಾಗಿ ತಿಳುಕೊಳ್ಳಿರಿ. ನಿಶ್ಚಯವಾಗಿ ಸ್ವಂತ ಪ್ರಾಣಗಳಿಗೆ ವಿರೋಧವಾಗಿ ಮೋಸಮಾಡಿದ್ದೀರಿ;

20ನಮಗೋಸ್ಕರ ನಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡೆಂದೂ ನಮ್ಮ ದೇವರಾದ ಕರ್ತನು ಏನೇನು ಹೇಳುವನೋ ಅದನ್ನು ನಮಗೆ ತಿಳಿಸು, ಆಗ ನಾವು ಮಾಡುವೆವೆಂದೂ ಹೇಳಿ, ನನ್ನನ್ನು ನಿಮ್ಮ ದೇವರಾದ ಕರ್ತನ ಬಳಿಗೆ ಕಳುಹಿಸಿದಿರಿ.

21ನಾನು ಈ ಹೊತ್ತು ಅದನ್ನು ನಿಮಗೆ ತಿಳಿಸಿದ್ದೇನೆ; ಆದರೆ ನೀವು ನಿಮ್ಮ ದೇವರಾದ ಕರ್ತನ ಶಬ್ದವನ್ನಾದರೂ ಆತನು ಯಾವದರ ವಿಷಯ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೋ ಅದರಲ್ಲಿ ಯಾವದನ್ನಾದರೂ ಕೇಳ ಲಿಲ್ಲವಾದರೆ

22ನೀವು ವಾಸಿಸುವದಕ್ಕೆ ಹೋಗಲು ಮನಸ್ಸು ಮಾಡುವ ಸ್ಥಳದಲ್ಲಿ ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯುವಿರೆಂದು ಈಗ ನೀವು ನಿಶ್ಚಯವಾಗಿ ತಿಳುಕೊಳ್ಳಿರಿ ಅಂದನು.

ಯೆರೆಮಿಯ 42 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी