ನಿನ್ನ ಅಂತ್ಯದಲ್ಲಿ ನಿರೀಕ್ಷೆ ಉಂಟೆಂದು ಕರ್ತನು ಅನ್ನುತ್ತಾನೆ; ನಿನ್ನ ಮಕ್ಕಳು ತಮ್ಮ ಮೇರೆಗೆ ತಿರುಗಿ ಬರುವರು.
15ಕರ್ತನು ಹೀಗೆ ಹೇಳುತ್ತಾನೆ; ರಾಮದಲ್ಲಿ ಸ್ವರವೂ ಗೋಳಾಟವೂ ಅಘೋರವಾದ ಅಳುವಿಕೆಯೂ ಕೇಳಲ್ಪ ಟ್ಟಿತು; ರಾಹೇಲಳು ತನ್ನ ಮಕ್ಕಳಿಲ್ಲದ್ದರಿಂದ ಆದರಣೆ ಹೊಂದಲೊಲ್ಲದೆ ಅಳುತ್ತಾಳೆ;
16ಕರ್ತನು ಹೀಗೆ ಹೇಳು ತ್ತಾನೆ--ನಿನ್ನ ಸ್ವರವನ್ನು ಅಳದ ಹಾಗೆಯೂ ಕಣ್ಣುಗಳು ಕಣ್ಣೀರು ಇಡದ ಹಾಗೆಯೂ ಬಿಗಿ ಹಿಡಿ; ನಿನ್ನ ಕೆಲಸಕ್ಕೆ ಪ್ರತಿಫಲ ಉಂಟೆಂದು ಕರ್ತನು ಅನ್ನುತ್ತಾನೆ; ಅವರು ಶತ್ರುವಿನ ದೇಶದಿಂದ ತಿರುಗಿ ಬರುವರು.
17ನಿನ್ನ ಅಂತ್ಯದಲ್ಲಿ ನಿರೀಕ್ಷೆ ಉಂಟೆಂದು ಕರ್ತನು ಅನ್ನುತ್ತಾನೆ; ನಿನ್ನ ಮಕ್ಕಳು ತಮ್ಮ ಮೇರೆಗೆ ತಿರುಗಿ ಬರುವರು.
18ಎಫ್ರಾಯಾಮನು ಅಂಗಲಾಚುವದನ್ನು ನಿಶ್ಚಯ ವಾಗಿ ಕೇಳಿದೆನು; ಹೇಗಂದರೆ--ನೀನು ನನ್ನನ್ನು ಶಿಕ್ಷಿ ಸಿದಿ; ತಿದ್ದುಪಾಟಾಗದ ಎತ್ತಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು; ನನ್ನನ್ನು ತಿರುಗಿಸು, ಆಗ ತಿರುಗಿ ಕೊಳ್ಳುವೆನು; ಓ ಕರ್ತನೇ, ನೀನೇ ನನ್ನ ದೇವ ರಾಗಿದ್ದೀ.
19ನಿಶ್ಚಯವಾಗಿ ನಾನು ತಿರುಗಿಕೊಂಡ ಮೇಲೆ ಪಶ್ಚಾತ್ತಾಪಪಟ್ಟೆನು; ಉಪದೇಶಹೊಂದಿದ ಮೇಲೆ ತೊಡೆಯ ಮೇಲೆ ಬಡಕೊಂಡೆನು; ನಾಚಿಕೆಪಟ್ಟೆನು, ಹೌದು, ಅವಮಾನ ಹೊಂದಿದೆನು; ನನ್ನ ಯೌವನದ ನಿಂದೆಯನ್ನು ತಾಳಿಕೊಂಡೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ