ಯೆಶಾಯ 34:4

ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವದು, ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ಅವುಗಳ ಸೈನ್ಯವೆಲ್ಲಾ ಬಾಡಿ ಕೆಳಗೆ ಬೀಳುವದು.

ಸಂದರ್ಭದೊಂದಿಗೆ ಓದಿ · ಯೆಶಾಯ 34

2ಕರ್ತನು ಸಕಲ ಜನಾಂಗಗಳ ಮೇಲೆ ಕೋಪಮಾಡಿ ಅವುಗಳ ಎಲ್ಲಾ ಸೈನ್ಯಗಳ ಮೇಲೆ ರೋಷಗೊಂಡು ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ನಾಶಮಾಡಿದ್ದಾನೆ.

3ಅವರಲ್ಲಿ ಕೊಂದುಹಾಕಲ್ಪಟ್ಟವರು ಬಿಸಾಡಲ್ಪಡು ವರು. ಅವರ ಹೆಣಗಳ ದುರ್ವಾಸನೆಯು ಮೇಲಕ್ಕೆ ಏರುವದು. ಅವರ ರಕ್ತಪ್ರವಾಹದಿಂದ ಪರ್ವತಗಳು ಕರಗಿಹೋಗುವವು.

4ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವದು, ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ಅವುಗಳ ಸೈನ್ಯವೆಲ್ಲಾ ಬಾಡಿ ಕೆಳಗೆ ಬೀಳುವದು.

5ನನ್ನ ಖಡ್ಗವು ಪರಲೋಕದಲ್ಲಿ ರೋಷ ಪಾನಮಾಡುವದು; ಇಗೋ, ಅದು ಎದೋ ಮಿನ ಮತ್ತು ನಾನು ಶಪಿಸಿದ ಜನರ ಮೇಲೆ ನ್ಯಾಯ ತೀರಿಸುವದಕ್ಕಾಗಿ ಕೆಳಗೆ ಇಳಿದು ಬರುವದು.

6ಕರ್ತನ ಖಡ್ಗವು ರಕ್ತದಿಂದ ತುಂಬಿದೆ; ಅದು ಕುರಿಹೋತಗಳ ರಕ್ತದಿಂದಲೂ ಟಗರುಗಳ ಮೂತ್ರಪಿಂಡದ ಕೊಬ್ಬಿ ನಿಂದಲೂ ಪುಷ್ಟಿಯಾಯಿತು; ಯಾಕಂದರೆ ಕರ್ತನು ಬೊಚ್ರದಲ್ಲಿ ಬಲಿಯನ್ನೂ ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯನ್ನೂ ಉಂಟು ಮಾಡಿದ್ದಾನೆ.

ಯೆಶಾಯ 34 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी