ನ್ಯಾಯಸ್ಥಾಪಕರು 18:1

ಆ ದಿವಸಗಳಲ್ಲಿ ಇಸ್ರಾಯೇಲಿನೊಳಗೆ ಅರಸನಿರಲಿಲ್ಲ. ಆ ದಿವಸಗಳಲ್ಲಿ ದಾನನ ಗೋತ್ರದವರು ವಾಸವಾಗಿರುವದಕ್ಕೆ ತಮಗೆ ಬಾಧ್ಯತೆ ಯನ್ನು ಹುಡುಕುತ್ತಿದ್ದರು. ಯಾಕಂದರೆ ಅಂದಿನ ವರೆಗೆ ಅವರಿಗೆ ಇಸ್ರಾಯೇಲ್‌ ಗೋತ್ರಗಳಲ್ಲಿ ಪೂರ್ಣವಾಗಿ ಬಾಧ್ಯತೆ ದೊರಕಲಿಲ್ಲ.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 18

1ಆ ದಿವಸಗಳಲ್ಲಿ ಇಸ್ರಾಯೇಲಿನೊಳಗೆ ಅರಸನಿರಲಿಲ್ಲ. ಆ ದಿವಸಗಳಲ್ಲಿ ದಾನನ ಗೋತ್ರದವರು ವಾಸವಾಗಿರುವದಕ್ಕೆ ತಮಗೆ ಬಾಧ್ಯತೆ ಯನ್ನು ಹುಡುಕುತ್ತಿದ್ದರು. ಯಾಕಂದರೆ ಅಂದಿನ ವರೆಗೆ ಅವರಿಗೆ ಇಸ್ರಾಯೇಲ್‌ ಗೋತ್ರಗಳಲ್ಲಿ ಪೂರ್ಣವಾಗಿ ಬಾಧ್ಯತೆ ದೊರಕಲಿಲ್ಲ.

2ಅವರು ದೇಶವನ್ನು ಪಾಳತಿ ನೋಡಿ ಶೋಧಿಸುವದಕ್ಕಾಗಿ ತಮ್ಮ ಮೇರೆಗಳಲ್ಲಿರುವ ಚೊರ್ಗದಿಂದಲೂ ಎಷ್ಟಾವೋಲಿನಿಂದಲೂ ತಮ್ಮ ಕುಟುಂಬದಲ್ಲಿ ಪರಾಕ್ರಮಶಾಲಿಗಳಾದ ಐದು ಮಂದಿ ಯನ್ನು ಕರೆದು ಅವರಿಗೆ--ನೀವು ಹೋಗಿ ದೇಶವನ್ನು ಶೋಧಿಸಿರಿ ಎಂದು ಹೇಳಿ ಕಳುಹಿಸಿದರು. ಹಾಗೆಯೇ ಇವರು ಎಫ್ರಾಯಾಮ್‌ ಬೆಟ್ಟದಲ್ಲಿರುವ ವಿಾಕನ ಮನೆಯ ಬಳಿಗೆ ಬಂದು ಅಲ್ಲಿ ಇಳುಕೊಂಡರು.

3ಅವರು ವಿಾಕನ ಮನೆಯ ಬಳಿಯಲ್ಲಿರುವಾಗ ಲೇವಿಯನಾದ ಪ್ರಾಯಸ್ಥನ ಸ್ವರವನ್ನು ತಿಳುಕೊಂಡು ಅವನ ಬಳಿಗೆ ಹೋಗಿ--ನಿನ್ನನ್ನು ಇಲ್ಲಿಗೆ ಕರಕೊಂಡು ಬಂದವರು ಯಾರು? ಇಲ್ಲಿ ಏನು ಮಾಡುತ್ತಿ? ಇಲ್ಲಿ ನಿನಗೆ ಏನು ಇದೆ ಅಂದರು.

ನ್ಯಾಯಸ್ಥಾಪಕರು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी