ಯೆಶಾಯ 5:7

ಸೈನ್ಯಗಳ ಕರ್ತನ ದ್ರಾಕ್ಷೇ ತೋಟವು ಇಸ್ರಾಯೇಲಿನ ಮನೆಯೇ, ಯೆಹೂದದ ಜನವೋ, ಆತನ ಇಷ್ಟದ ಗಿಡವೇ. ಆತನು ನ್ಯಾಯವನ್ನು ನಿರೀ ಕ್ಷಿಸಲು, ಇಗೋ, ಹಿಂಸೆಯೇ; ನೀತಿಯನ್ನು ನಿರೀಕ್ಷಿಸಲು ಗೋಳಾಟವೇ ಸಿಕ್ಕೀತು.

ಸಂದರ್ಭದೊಂದಿಗೆ ಓದಿ · ಯೆಶಾಯ 5

5ನನ್ನ ದ್ರಾಕ್ಷೇ ತೋಟಕ್ಕೆ ನಾನು ಮಾಡುವದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿ ಯನ್ನು ತೆಗೆದುಹಾಕುವೆನು. ಆಗ ಅದು ಮೇಯಲ್ಪಡು ವದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವದು.

6ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.

7ಸೈನ್ಯಗಳ ಕರ್ತನ ದ್ರಾಕ್ಷೇ ತೋಟವು ಇಸ್ರಾಯೇಲಿನ ಮನೆಯೇ, ಯೆಹೂದದ ಜನವೋ, ಆತನ ಇಷ್ಟದ ಗಿಡವೇ. ಆತನು ನ್ಯಾಯವನ್ನು ನಿರೀ ಕ್ಷಿಸಲು, ಇಗೋ, ಹಿಂಸೆಯೇ; ನೀತಿಯನ್ನು ನಿರೀಕ್ಷಿಸಲು ಗೋಳಾಟವೇ ಸಿಕ್ಕೀತು.

8ಸ್ಥಳ ಮಿಗಿಸದೆ ನೀವು ಭೂಮಿಯ ಮಧ್ಯದಲ್ಲಿ ಒಂಟಿಯಾಗಿ ವಾಸಿಸುವಂತೆ ಮನೆಗೆ ಮನೆ ಕೂಡಿಸಿ ಹೊಲಕ್ಕೆ ಹೊಲ ಸೇರಿಸುವವರಿಗೆ ಅಯ್ಯೋ!

9ಸೈನ್ಯ ಗಳ ಕರ್ತನು ನನ್ನ ಕಿವಿಗಳಲ್ಲಿ ಹೇಳುವದೇನಂದರೆ --ನಿಜವಾಗಿಯೂ ಅನೇಕ ದೊಡ್ಡದಾದವುಗಳೂ ಸೊಗಸಾದ ಅನೇಕ ಮನೆಗಳೂ ವಾಸಿಸುವವನು ಇಲ್ಲದೆ ಹಾಳುಬೀಳುವವು.

ಯೆಶಾಯ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी