ಅಬೀಯಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟವಲ್ಲವೋ?
4ಅವನ ತರುವಾಯ ಅವನ ಮಗನನ್ನು ನೇಮಿಸುವದಕ್ಕೂ ಯೆರೂಸಲೇಮನ್ನು ಸ್ಥಿರಪಡಿಸುವದಕ್ಕೂ ತನ್ನ ದೇವರಾದ ಕರ್ತನು ದಾವೀದನ ನಿಮಿತ್ತ ಯೆರೂ ಸಲೇಮಿನಲ್ಲಿ ಅವನಿಗೆ ದೀಪವನ್ನು ಕೊಟ್ಟನು.
5ದಾವೀದನು ಹಿತ್ತಿಯನಾದ ಊರೀಯನ ವಿಷಯ ಹೊರತಾಗಿ ತನ್ನ ಜೀವಿತದ ಸಮಸ್ತ ದಿವಸಗಳಲ್ಲಿ ಕರ್ತನು ತನಗೆ ಆಜ್ಞಾಪಿಸಿದ ಎಲ್ಲಾದಕ್ಕೆ ತೊಲಗದೆ ಆತನ ದೃಷ್ಟಿಗೆ ಮೆಚ್ಚಿಗೆಯಾದದ್ದನ್ನು ಮಾಡಿ ದನು. ಆದರೆ ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಅವರ ಜೀವಾಂತ್ಯದ ವರೆಗೆ ಯುದ್ಧಉಂಟಾಗಿತ್ತು.
6ಅಬೀಯಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟವಲ್ಲವೋ?
7ಅಬೀಯಾಮನಿಗೂ ಯಾರೂಬ್ಬಾಮನಿಗೂ ಯುದ್ಧ ನಡೆಯುತ್ತಿತ್ತು.
8ಅಬೀಯಾಮನು ತನ್ನ ಪಿತೃಗಳ ಸಂಗಡ ಮಲಗಿ ದನು; ದಾವೀದನ ಪಟ್ಟಣದಲ್ಲಿ ಅವನನ್ನು ಹೂಣಿ ಟ್ಟರು. ಅವನ ಮಗನಾದ ಆಸನು ಅವನಿಗೆ ಬದಲಾಗಿ ಆಳಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ