ಅರಣ್ಯಕಾಂಡ 18:30

ನೀನು ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಅದರಲ್ಲಿ ಉತ್ತಮವಾದದ್ದನ್ನು ಎತ್ತಿದಾಗ ಅದು ಲೇವಿಯರಿಗೆ ಕಣದ ಆದಾಯದ ಹಾಗೆಯೂ ದ್ರಾಕ್ಷೇ ತೊಟ್ಟಿಯ ಆದಾಯದ ಹಾಗೆಯೂ ಎಣಿಸಲ್ಪಡುವದು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 18

28ಈ ಪ್ರಕಾರ ನೀವು ಸಹ ಇಸ್ರಾಯೇಲ್‌ ಮಕ್ಕಳ ಕಡೆಯಿಂದ ತಕ್ಕೊಳ್ಳುವ ನಿಮ್ಮ ಎಲ್ಲಾ ಹತ್ತನೆಯವುಗಳಿಂದ ಕರ್ತನಿಗೆ ಎತ್ತುವ ಕಾಣಿಕೆಯನ್ನು ಅರ್ಪಿಸಬೇಕು; ನೀವು ಅದರಿಂದ ಕರ್ತ ನಿಗೆ ಎತ್ತುವ ಅರ್ಪಣೆಯನ್ನು ಯಾಜಕನಾದ ಆರೋನ ನಿಗೆ ಕೊಡಬೇಕು.

29ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.

30ನೀನು ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಅದರಲ್ಲಿ ಉತ್ತಮವಾದದ್ದನ್ನು ಎತ್ತಿದಾಗ ಅದು ಲೇವಿಯರಿಗೆ ಕಣದ ಆದಾಯದ ಹಾಗೆಯೂ ದ್ರಾಕ್ಷೇ ತೊಟ್ಟಿಯ ಆದಾಯದ ಹಾಗೆಯೂ ಎಣಿಸಲ್ಪಡುವದು.

31ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಇದು ಸಭೆಯ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ನಿಮಗೆ ಪ್ರತಿಫಲ ವಾಗಿದೆ.

32ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್‌ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು.

ಅರಣ್ಯಕಾಂಡ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी