ಯೆಹೋಶುವ 7:7

ಇದಲ್ಲದೆ ಯೆಹೋಶುವನು--ಅಯ್ಯೋ, ಓ ಕರ್ತನಾದ ದೇವರೇ, ನಮ್ಮನ್ನು ನಾಶಮಾಡುವ ಹಾಗೆ ಅಮೋರಿ ಯರ ಕೈಯಲ್ಲಿ ಒಪ್ಪಿಸಿ ಕೊಡುವದಕ್ಕಾಗಿ ನೀನು ಈ ಜನರು ಯೊರ್ದನನ್ನು ದಾಟಮಾಡಿದ್ದೇನು? ನಮಗೆ ಇಷ್ಟೇ ಸಾಕೆಂದು ನಾವು ಯೊರ್ದನಿನ ಆಚೆಯಲ್ಲಿ ಇದ್ದರೆ ಒಳ್ಳೇದಾಗಿತ್ತು.

ಸಂದರ್ಭದೊಂದಿಗೆ ಓದಿ · ಯೆಹೋಶುವ 7

5ಆಯಿ ಮನುಷ್ಯರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಹೊಡೆದು ಹಾಕಿದರು. ಬಾಗಲಿನಿಂದ ಪ್ರಾರಂಭಿಸಿ ಷೆಬಾರಿಮಿನ ವರೆಗೂ ಅವರನ್ನು ಹಿಂದಟ್ಟಿ ಇಳಿದು ಹೋಗುವ ವರೆಗೂ ಅವರನ್ನು ಹೊಡೆದರು. ಆದದ ರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.

6ಆಗ ಯೆಹೋಶುವನು ತನ್ನ ವಸ್ತ್ರಗಳನ್ನು ಹರಿದುಕೊಂಡು ತಾನೂ ಇಸ್ರಾಯೇಲಿನ ಹಿರಿಯರೂ ತಮ್ಮ ತಲೆಗಳ ಮೇಲೆ ಧೂಳನ್ನು ಹಾಕಿಕೊಂಡು ಸಾಯಂಕಾಲದ ವರೆಗೆ ಕರ್ತನ ಮಂಜೂಷದ ಮುಂದೆ ನೆಲದಮೇಲೆ ಬೋರಲು ಬಿದ್ದರು.

7ಇದಲ್ಲದೆ ಯೆಹೋಶುವನು--ಅಯ್ಯೋ, ಓ ಕರ್ತನಾದ ದೇವರೇ, ನಮ್ಮನ್ನು ನಾಶಮಾಡುವ ಹಾಗೆ ಅಮೋರಿ ಯರ ಕೈಯಲ್ಲಿ ಒಪ್ಪಿಸಿ ಕೊಡುವದಕ್ಕಾಗಿ ನೀನು ಈ ಜನರು ಯೊರ್ದನನ್ನು ದಾಟಮಾಡಿದ್ದೇನು? ನಮಗೆ ಇಷ್ಟೇ ಸಾಕೆಂದು ನಾವು ಯೊರ್ದನಿನ ಆಚೆಯಲ್ಲಿ ಇದ್ದರೆ ಒಳ್ಳೇದಾಗಿತ್ತು.

8ಓ ಕರ್ತನೇ, ಈಗ ನಾನೇನು ಹೇಳಲಿ? ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಬೆನ್ನು ತಿರುಗಿಸಿದ್ದಾರಲ್ಲಾ.

9ಯಾಕಂದರೆ ಕಾನಾನ್ಯರೂ ದೇಶ ವಾಸಿಗಳೆಲ್ಲರೂ ಇದನ್ನು ಕೇಳಿ ನಮ್ಮ ಸುತ್ತಲೂ ಸುತ್ತಿ ಕೊಂಡು ನಮ್ಮ ಹೆಸರನ್ನು ಭೂಮಿಯಿಂದ ತೆಗೆದು ಬಿಡುವರು; ಆಗ ನಿನ್ನ ಮಹತ್ತಾದ ಹೆಸರಿಗೆ ಏನು ಮಾಡುವಿ ಅಂದನು.

ಯೆಹೋಶುವ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी