ಯೆಹೋಶುವ 17:13

ಆದರೆ ಇಸ್ರಾಯೇಲ್‌ ಮಕ್ಕಳು ಬಲಗೊಂಡಾಗ ಕಾನಾನ್ಯರನ್ನು ಹೊರಡಿಸದೆ ಅವರನ್ನು ಕಪ್ಪ ಕೊಡುವವರಾಗುವಂತೆ ಮಾಡಿಕೊಂಡರು.

ಸಂದರ್ಭದೊಂದಿಗೆ ಓದಿ · ಯೆಹೋಶುವ 17

11ಉತ್ತರಕ್ಕೆ ಇರುವ ಆಶೇರಿನಿಂದ ಪೂರ್ವಕ್ಕೆ ಇರುವ ಇಸ್ಸಾಕಾರನ ವರೆಗೆ ಒಟ್ಟಿಗೆ ಕೂಡಿಕೊಳ್ಳುವದು. ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದ ಲ್ಲಿಯೂ ಇರುವ ಮೂರು ಸೀಮೆಗಳಾದ ಬೇತ್‌ಷೆ ಯಾನ್‌ ಇಬ್ಲೆಯಾಮ್‌ ದೋರ್‌ ಎಂದೋರ್‌ ತಾನಕ್‌ ಮೆಗಿದ್ದೋನ್‌ ಅವುಗಳ ಗ್ರಾಮಗಳೂ ಇವು ಮನಸ್ಸೆ ಯವು.

12ಆದರೆ ಮನಸ್ಸೆಯ ಮಕ್ಕಳು ಆ ಪಟ್ಟಣಗಳ ನಿವಾಸಿಗಳನ್ನು ಹೊರಡಿಸುವದಕ್ಕಾಗದೆ ಹೋಯಿತು. ಕಾನಾನ್ಯರು ಆ ಸೀಮೆಯಲ್ಲೇ ವಾಸವಾಗಿರಲು ಇಷ್ಟ ಪಟ್ಟರು.

13ಆದರೆ ಇಸ್ರಾಯೇಲ್‌ ಮಕ್ಕಳು ಬಲಗೊಂಡಾಗ ಕಾನಾನ್ಯರನ್ನು ಹೊರಡಿಸದೆ ಅವರನ್ನು ಕಪ್ಪ ಕೊಡುವವರಾಗುವಂತೆ ಮಾಡಿಕೊಂಡರು.

14ಯೋಸೇಫನ ಮಕ್ಕಳ ಜನಾಂಗ ಯೆಹೋಶು ವನ ಸಂಗಡ ಮಾತನಾಡಿ--ಕರ್ತನು ನನ್ನನ್ನು ಈ ವರೆಗೂ ಆಶೀರ್ವದಿಸುತ್ತಾ ಬಂದದ್ದರಿಂದ ನಾನು ಮಹಾಜನಾಂಗವಾಗಿದ್ದೇನೆ. ಹೀಗಿರುವಾಗ ನೀನು ನನಗೆ ಬಾಧ್ಯೆತೆಯಾಗಿ ಒಂದೇ ಭಾಗವನ್ನು ಒಂದೇ ಪಾಲನ್ನು ಕೊಟ್ಟದ್ದು ಯಾಕೆ ಅಂದರು.

15ಅದಕ್ಕೆ ಯೆಹೋಶುವನು ಪ್ರತ್ಯುತ್ತರವಾಗಿ ಅವರಿಗೆ--ನೀನು ಮಹಾಜನಾಂಗವಾಗಿದ್ದು ನಿನಗೆ ಎಫ್ರಾಯಾಮಿನ ಪರ್ವತವು ಇಕ್ಕಟ್ಟಾಗಿದರೆ ನೀನು ಪೆರಿಜ್ಜೀಯರ ಮತ್ತು ರೆಫಾಯರ ದೇಶದಲ್ಲಿರುವ ಅಡವಿಗೆ ಹೋಗಿ ಅದನ್ನು ಕಡಿದು ನಿನಗೋಸ್ಕರ ಸ್ಥಳಮಾಡಿಕೋ, ಅಂದನು.

ಯೆಹೋಶುವ 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी