೧ ಪೂರ್ವಕಾಲವೃತ್ತಾಂತ 17:7

ಈಗ ನೀನು ನನ್ನ ಸೇವಕನಾದ ದಾವೀದನಿಗೆ ಹೇಳ ಬೇಕಾದದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನೀನು ನನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿರಲು ಕುರಿಗಳ ಹಿಂದೆ ನಡೆದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡೆನು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 17

5ನಾನು ಐಗುಪ್ತದಿಂದ ಇಸ್ರಾ ಯೇಲಿನ ಮಕ್ಕಳನ್ನು ಬರಮಾಡಿದ ದಿವಸ ಮೊದಲು ಗೊಂಡು ಇಂದಿನ ವರೆಗೂ ಮನೆಯಲ್ಲಿ ವಾಸಮಾಡದೆ ಡೇರೆಯಿಂದ ಡೇರೆಗೂ ಗುಡಾರದಿಂದ ಗುಡಾರಕ್ಕೂ ಹೋಗುತ್ತಿದ್ದೆನು.

6ನಾನು ನನ್ನ ಜನರಾದ ಇಸ್ರಾಯೇ ಲ್ಯರನ್ನು ಮೇಯಿಸಲು ಆಜ್ಞಾಪಿಸಿದ ಇಸ್ರಾಯೇಲಿನ ಅಧಿಪತಿಗಳಲ್ಲಿ ಒಬ್ಬನ ಸಂಗಡಲಾದರೂ--ನೀವು ನನಗೆ ದೇವದಾರು ಮನೆಯನ್ನು ಯಾಕೆ ಕಟ್ಟಲಿಲ್ಲ ವೆಂದು ನಾನು ಸಮಸ್ತ ಇಸ್ರಾಯೇಲಿನ ಸಂಗಡ ನಡೆದ ಯಾವ ಸ್ಥಳದಲ್ಲಾದರೂ ಏನಾದರೂ ಹೇಳಿದೆನೋ?

7ಈಗ ನೀನು ನನ್ನ ಸೇವಕನಾದ ದಾವೀದನಿಗೆ ಹೇಳ ಬೇಕಾದದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನೀನು ನನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿರಲು ಕುರಿಗಳ ಹಿಂದೆ ನಡೆದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡೆನು.

8ನೀನು ಎಲ್ಲಿಗೆ ಹೋದರೂ ಅಲ್ಲಿ ನಿನ್ನ ಸಂಗಡ ಇದ್ದು ನಿನ್ನ ಶತ್ರುಗಳೆಲ್ಲರನ್ನು ನಿನ್ನ ಮುಂದೆ ಸಂಹರಿಸಿ ಭೂಮಿಯಲ್ಲಿರುವ ದೊಡ್ಡವರ ಹೆಸರಿನ ಹಾಗೆ ಹೆಸರನ್ನು ನಿನಗೆ ಉಂಟುಮಾಡಿದೆನು.

9ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲ್ಯರಿಗೆ ಒಂದು ಸ್ಥಳವನ್ನು ನೇಮಿಸಿ ಅವರು ಇನ್ನು ಮೇಲೆ ಚದರದೆ ಸ್ವಸ್ಥಳದಲ್ಲಿ ವಾಸಮಾಡುವ ಹಾಗೆ ಅವರನ್ನು ನೆಡುವೆನು. ಪೂರ್ವದ ಹಾಗೆಯೂ ನನ್ನ ಜನರಾದ ಇಸ್ರಾಯೇ ಲಿನ ಮೇಲೆ ನ್ಯಾಯಾಧಿಪತಿಗಳನ್ನು ನೇಮಿಸಿದ ದಿವಸ ದಿಂದಾದ ಹಾಗೆಯೂ ದುಷ್ಟತನದ ಮಕ್ಕಳು ಇನ್ನು ಮೇಲೆ ಅವರನ್ನು ಕುಂದಿಸದೆ ಇರುವರು.

೧ ಪೂರ್ವಕಾಲವೃತ್ತಾಂತ 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी