ನ್ಯಾಯಸ್ಥಾಪಕರು 18:28

ಅದು ಚೀದೋನಿಗೆ ದೂರವಾಗಿ ದ್ದದರಿಂದಲೂ ಯಾವ ಮನುಷ್ಯನ ಸಂಗಡವಾದರೂ ಅವರಿಗೆ ಕೆಲಸವಿಲ್ಲದ್ದರಿಂದಲೂ ತಪ್ಪಿಸುವವರು ಯಾರೂ ಇರಲಿಲ್ಲ. ಆ ಪಟ್ಟಣವು ಬೇತ್‌ರೆಹೋಬಿಗೆ ಸವಿಾಪವಾದ ತಗ್ಗಿನಲ್ಲಿ ಇತ್ತು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 18

26ದಾನ್ಯರು ತಮ್ಮ ಮಾರ್ಗ ವಾಗಿ ಹೋದರು. ಆಗ ಅವರು ತನಗಿಂತ ಬಲಿಷ್ಠ ರೆಂದು ವಿಾಕನು ನೋಡಿ ತಿರುಗಿಕೊಂಡು ತನ್ನ ಮನೆಗೆ ಹೋದನು.

27ಆದರೆ ಅವರು ವಿಾಕನು ಮಾಡಿಕೊಂಡವು ಗಳನ್ನೂ ಅವನೊಂದಿಗಿದ್ದ ಯಾಜಕನನ್ನೂ ಅಪಹರಿಸಿ ಕೊಂಡು ವಿಶ್ರಾಂತಿಯಾಗಿಯೂ ಭರವಸವಾಗಿಯೂ ಇದ್ದ ಲಯಿಷಿನ ಜನರ ಮೇಲೆ ಬಂದು ಅವರನ್ನು ಕತ್ತಿಯಿಂದ ಹೊಡೆದು ಆ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.

28ಅದು ಚೀದೋನಿಗೆ ದೂರವಾಗಿ ದ್ದದರಿಂದಲೂ ಯಾವ ಮನುಷ್ಯನ ಸಂಗಡವಾದರೂ ಅವರಿಗೆ ಕೆಲಸವಿಲ್ಲದ್ದರಿಂದಲೂ ತಪ್ಪಿಸುವವರು ಯಾರೂ ಇರಲಿಲ್ಲ. ಆ ಪಟ್ಟಣವು ಬೇತ್‌ರೆಹೋಬಿಗೆ ಸವಿಾಪವಾದ ತಗ್ಗಿನಲ್ಲಿ ಇತ್ತು.

29ಅಲ್ಲಿ ಅವರು ಪಟ್ಟಣವನ್ನು ಕಟ್ಟಿ ಅದರಲ್ಲಿ ವಾಸವಾಗಿದ್ದರು. ಆದರೆ ಪಟ್ಟಣಕ್ಕೆ ಇಸ್ರಾಯೇಲಿಗೆ ಹುಟ್ಟಿದ ತಮ್ಮ ತಂದೆಯಾದ ದಾನನ ಹೆಸರಿನ ಹಾಗೆಯೇ ದಾನನು ಎಂದು ಹೆಸರಿಟ್ಟರು.

30ಆದರೆ ಮೊದಲು ಆ ಪಟ್ಟಣಕ್ಕೆ ಲಯಿಷೆಂಬ ಹೆಸರು ಇತ್ತು. ಆಗ ದಾನನ ಮಕ್ಕಳು ಆ ಕೆತ್ತಿದ ವಿಗ್ರಹವನ್ನು ತಮಗೆ ಸ್ಥಾಪಿಸಿಕೊಂಡರು. ಮನಸ್ಸೆಯ ಮೊಮ್ಮಗನೂ ಗೆರ್ಷೋಮನ ಮಗನೂ ಯೋನಾ ತಾನನೂ ಅವನ ಮಕ್ಕಳೂ ಆ ದೇಶದವರು ಸೆರೆಯಾಗಿ ಒಯ್ಯಲ್ಪಡುವ ದಿವಸದ ವರೆಗೂ ದಾನನ ಗೋತ್ರದ ವರಿಗೆ ಯಾಜಕರಾಗಿದ್ದರು.

ನ್ಯಾಯಸ್ಥಾಪಕರು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी