ಹಬಕ್ಕೂಕ್ಕ 1:4

ಆದದರಿಂದ ನ್ಯಾಯಪ್ರಮಾಣವು ಸಡಿಲವಾಗುತ್ತದೆ; ನ್ಯಾಯತೀರ್ಪು ಎಂದಿಗೂ ಹೊರಡುವದಿಲ್ಲ; ದುಷ್ಟರು ನೀತಿ ವಂತರನ್ನು ಸುತ್ತಿಕೊಂಡಿದ್ದಾರೆ; ಆದದರಿಂದ ತಪ್ಪಾಗಿ ನ್ಯಾಯತೀರ್ಪು ಹೊರಡುತ್ತದೆ.

ಸಂದರ್ಭದೊಂದಿಗೆ ಓದಿ · ಹಬಕ್ಕೂಕ್ಕ 1

2ಓ ಕರ್ತನೇ, ನಾನು ನಿನಗೆ ಮೊರೆಯಿಟ್ಟರೂ ಎಷ್ಟರ ವರೆಗೆ ನೀನು ಕೇಳದೇ ಇರುವಿ? ಹಿಂಸೆ ಹಿಂಸೆ ಎಂದು ನಿನಗೆ ಕೂಗುತ್ತೇನೆ; ಆದರೆ ನೀನು ರಕ್ಷಿಸುವದಿಲ್ಲ.

3ಯಾಕೆ ನನಗೆ ಅಪರಾಧವನ್ನು ತೋರಿಸಿ ಕಷ್ಟವನ್ನು ನೋಡಮಾಡುತ್ತೀ? ಸೂರೆಯೂ ಹಿಂಸೆಯೂ ನನ್ನ ಮುಂದೆ ಅವೆ; ಜಗಳವನ್ನೂ ತರ್ಕವನ್ನೂ ಎಬ್ಬಿಸುವವರು ಇದ್ದಾರೆ.

4ಆದದರಿಂದ ನ್ಯಾಯಪ್ರಮಾಣವು ಸಡಿಲವಾಗುತ್ತದೆ; ನ್ಯಾಯತೀರ್ಪು ಎಂದಿಗೂ ಹೊರಡುವದಿಲ್ಲ; ದುಷ್ಟರು ನೀತಿ ವಂತರನ್ನು ಸುತ್ತಿಕೊಂಡಿದ್ದಾರೆ; ಆದದರಿಂದ ತಪ್ಪಾಗಿ ನ್ಯಾಯತೀರ್ಪು ಹೊರಡುತ್ತದೆ.

5ಅನ್ಯಜನಾಂಗಗಳಲ್ಲಿ ನೋಡಿ ಲಕ್ಷ್ಯಗೊಟ್ಟು ಬಹಳ ವಾಗಿ ಆಶ್ಚರ್ಯಪಡಿರಿ; ತಿಳಿಸಿದರೂ ನೀವು ನಂಬದಂಥ ಕ್ರಿಯೆಯನ್ನು ನಿಮ್ಮ ದಿವಸಗಳಲ್ಲಿ ನಾನು ಮಾಡುತ್ತೇನೆ.

6ಇಗೋ, ನಾನು ಕಸ್ದೀಯರನ್ನು ಎಬ್ಬಿಸುತ್ತೇನೆ; ಅದು ಕಹಿಯಾದ ತೀವ್ರವಾದ ಜನಾಂಗವು; ತಮ್ಮದಲ್ಲದ ನಿವಾಸಗಳನ್ನು ವಶಮಾಡಿ ಕೊಳ್ಳುವದಕ್ಕೆ ವಿಶಾಲ ವಾದ ದೇಶದಲ್ಲಿ ಹಾದುಹೋಗುವದು.

ಹಬಕ್ಕೂಕ್ಕ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी