ದಾವೀದನು ಗಡಿ ಸ್ಥಳದಲ್ಲಿರುವಾಗ ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು.
12ಆದರೆ ಅವನು ಆ ಹೊಲದಲ್ಲಿ ನಿಂತುಕೊಂಡು ಅದನ್ನು ಕಾಪಾಡಿ ಫಿಲಿಷ್ಟಿಯರನ್ನು ಕೊಂದುಬಿಟ್ಟನು. ಹೀಗೆ ಕರ್ತನು ದೊಡ್ಡರಕ್ಷಣೆಯನ್ನುಂಟು ಮಾಡಿದನು.
13ಮೂವತ್ತು ಮಂದಿ ಮುಖ್ಯಸ್ಥರಲ್ಲಿ ಆ ಮೂರು ಮಂದಿ ಹೊರಟು ಸುಗ್ಗಿಯ ಕಾಲದಲ್ಲಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಬಂದರು; ಆಗ ಫಿಲಿಷ್ಟಿಯರ ದಂಡು ರೆಫಾಯಾಮ್ ತಗ್ಗಿನಲ್ಲಿ ಇಳಿ ದಿತ್ತು.
14ದಾವೀದನು ಗಡಿ ಸ್ಥಳದಲ್ಲಿರುವಾಗ ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು.
15ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವ ವನಾರೆಂದು ಬಹು ಆಶೆಯಿಂದ ಹೇಳಿದನು.
16ಆಗ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿ ಯರ ದಂಡನ್ನು ಭೇದಿಸಿ ಹೊರಟು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತಕ್ಕೊಂಡು ಬಂದರು. ಆದರೆ ಅವನು ಅದನ್ನು ಕುಡಿಯಲ್ಲೊಲ್ಲದೆ ಕರ್ತನಿಗಾಗಿ ಹೊಯಿ ದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ