ಅಪೊಸ್ತಲರ ಕೃತ್ಯಗಳು 8:32

ಅವನು ಓದುತ್ತಿದ್ದ ಬರಹದ ಭಾಗವು ಯಾವ ದಂದರೆ--ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ಆತನು ಒಯ್ಯಲ್ಪಟ್ಟನು; ಕುರಿಮರಿಯು ಉಣ್ಣೆ ಕತ್ತರಿಸು ವವನ ಮುಂದೆ ಮೌನವಾಗಿರುವಂತೆ ಆತನು ತನ್ನ ಬಾಯಿತೆರೆಯಲೇ ಇಲ್ಲ.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 8

30ಫಿಲಿಪ್ಪನು ಓಡಿಹೋಗಿ ಆ ಮನುಷ್ಯನು ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಿರುವದನ್ನು ಕೇಳಿ--ನೀನು ಓದುವದು ನಿನಗೆ ತಿಳಿಯುತ್ತದೋ ಅನ್ನಲು

31ಅವನು-ಯಾರಾದರೂ ನನಗೆ ತಿಳಿಸದ ಹೊರತು ಅದು ನನಗೆ ಹೇಗೆ ತಿಳಿದೀತು ಎಂದು ಹೇಳಿ ಫಿಲಿಪ್ಪನು ಮೇಲಕ್ಕೆ ಬಂದು ತನ್ನ ಬಳಿಯಲ್ಲಿ ಕೂತುಕೊಳ್ಳಬೇಕೆಂದು ಅವನು ಅಪೇಕ್ಷೆಪಟ್ಟನು.

32ಅವನು ಓದುತ್ತಿದ್ದ ಬರಹದ ಭಾಗವು ಯಾವ ದಂದರೆ--ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ಆತನು ಒಯ್ಯಲ್ಪಟ್ಟನು; ಕುರಿಮರಿಯು ಉಣ್ಣೆ ಕತ್ತರಿಸು ವವನ ಮುಂದೆ ಮೌನವಾಗಿರುವಂತೆ ಆತನು ತನ್ನ ಬಾಯಿತೆರೆಯಲೇ ಇಲ್ಲ.

33ಆತನಿಗುಂಟಾದ ದೀನಾ ವಸ್ಥೆಯಲ್ಲಿ ಆತನಿಗೆ ನ್ಯಾಯವು ಇಲ್ಲದೆ ಹೋಯಿತು. ಆತನ ವಂಶಾವಳಿಯನ್ನು ಯಾರು ಪ್ರಕಟಿಸುವರು? ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದು ಬಿಟ್ಟರಲ್ಲಾ ಎಂಬದೇ.

34ಕಂಚುಕಿಯು--ಇದನ್ನು ಪ್ರವಾದಿಯು ಯಾರ ವಿಷಯದಲ್ಲಿ ಹೇಳಿದ್ದಾನೆ? ತನ್ನ ವಿಷಯದಲ್ಲಿಯೋ? ಮತ್ತೊಬ್ಬನ ವಿಷಯದಲ್ಲಿಯೋ? ನನಗೆ ಹೇಳಬೇಕು ಎಂದು ಫಿಲಿಪ್ಪನನ್ನು ಕೇಳಿಕೊಂಡನು.

ಅಪೊಸ್ತಲರ ಕೃತ್ಯಗಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी