೨ ಸಮುವೇಲನು 19:11

ಅರಸನಾದ ದಾವೀದನು ಯಾಜಕರಾದ ಚಾದೋಕನ ಬಳಿಗೂ ಎಬ್ಯಾತಾರನ ಬಳಿಗೂ ಸೇವಕ ರನ್ನು ಕಳುಹಿಸಿ--ನೀವು ಯೆಹೂದದ ಹಿರಿಯರಿಗೆಎಲ್ಲಾ ಇಸ್ರಾಯೇಲಿನ ಮಾತು ಅರಸನಿಗೂ ಅವನ ಮನೆಗೂ ಬಂದಿರುವಾಗ ಅರಸನನ್ನು ಅವನ ಮನೆಗೆ ತಿರಿಗಿ ಕರಕೊಂಡು ಬರುವಂತೆ ನೀವು ಹಿಂಜರಿದ ದ್ದೇನು? ನೀವು ನನ್ನ ಸಹೋದರರೂ ನನ್ನ ಎಲುಬೂ ನನ್ನ ಮಾಂಸವೂ ಆಗಿದ್ದೀರಿ.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 19

9ಆದರೆ ಇಸ್ರಾಯೇಲಿನ ಎಲ್ಲಾ ಕುಲಗಳಲ್ಲಿರುವ ಎಲ್ಲಾ ಜನರು ತಮ್ಮೊಳಗೆ ವ್ಯಾಜ್ಯವಾಡಿ--ನಮ್ಮ ಶತ್ರು ಗಳ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ; ಫಿಲಿಷ್ಟಿಯರ ಕೈಯಿಂದ ನಮ್ಮನ್ನು ತಪ್ಪಿಸಿ ದವನೂ ಅವನೇ.

10ಆದರೆ ಈಗ ಅಬ್ಷಾಲೋಮನಿ ಗೋಸ್ಕರ ದೇಶವನ್ನು ಬಿಟ್ಟು ಓಡಿಹೋಗಿದ್ದಾನೆ. ನಮ್ಮನ್ನು ಆಳಲು ಅಭಿಷೇಕಿಸಲ್ಪಟ್ಟ ಅಬ್ಷಾಲೋಮನು ಯುದ್ಧದಲ್ಲಿ ಸತ್ತನು. ನಾವು ಈಗ ಅರಸನನ್ನು ತಿರಿಗಿ ಕರಕೊಂಡು ಬಾರದೆ ಸುಮ್ಮನೆ ಇರುವದು ಯಾಕೆ ಅಂದರು.

11ಅರಸನಾದ ದಾವೀದನು ಯಾಜಕರಾದ ಚಾದೋಕನ ಬಳಿಗೂ ಎಬ್ಯಾತಾರನ ಬಳಿಗೂ ಸೇವಕ ರನ್ನು ಕಳುಹಿಸಿ--ನೀವು ಯೆಹೂದದ ಹಿರಿಯರಿಗೆಎಲ್ಲಾ ಇಸ್ರಾಯೇಲಿನ ಮಾತು ಅರಸನಿಗೂ ಅವನ ಮನೆಗೂ ಬಂದಿರುವಾಗ ಅರಸನನ್ನು ಅವನ ಮನೆಗೆ ತಿರಿಗಿ ಕರಕೊಂಡು ಬರುವಂತೆ ನೀವು ಹಿಂಜರಿದ ದ್ದೇನು? ನೀವು ನನ್ನ ಸಹೋದರರೂ ನನ್ನ ಎಲುಬೂ ನನ್ನ ಮಾಂಸವೂ ಆಗಿದ್ದೀರಿ.

12ಹಾಗಾದರೆ ಅರಸನನ್ನು ತಿರಿಗಿ ಬರಮಾಡುವಂತೆ ನೀವು ಹಿಂಜರಿದದ್ದೇನು?

13ಇದಲ್ಲದೆ ನೀವು ಅಮಾಸನಿಗೆ--ನೀನು ನನ್ನ ಎಲುಬೂ ನನ್ನ ಮಾಂಸವೂ ಅಲ್ಲವೋ? ನೀನು ಯೋವಾಬನಿಗೆ ಬದಲಾಗಿ ಯಾವಾಗಲೂ ನನ್ನ ಮುಂದೆ ಸೈನ್ಯದ ಪ್ರಧಾನನಾಗಿರದೆ ಹೋದರೆ ದೇವರು ನನಗೆ ಹಾಗೆಯೇ ಮಾಡಲಿ ಎಂದು ಹೇಳಿರಿ ಅಂದನು.

೨ ಸಮುವೇಲನು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी