೧ ಅರಸುಗಳು 11:14

ಆಗ ಕರ್ತನು ಎದೋಮ್ಯನಾದ ಹದದನನ್ನು ಸೊಲೊಮೋನನಿಗೆ ಶತ್ರುವಾಗಿರಲು ಎಬ್ಬಿಸಿದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 11

12ಆದರೆ ನಿನ್ನ ತಂದೆಯಾದ ದಾವೀದನಿಗೋಸ್ಕರ ನಿನ್ನ ಕಾಲ ದಲ್ಲಿ ನಾನು ಇದನ್ನು ಮಾಡದೆ ನಿನ್ನ ಮಗನ ಕೈಯೊಳಗಿಂದ ಅದನ್ನು ಕಸಕೊಳ್ಳುವೆನು.

13ಇದಲ್ಲದೆ ರಾಜ್ಯವನ್ನೆಲ್ಲಾ ನಾನು ಕಸಕೊಳ್ಳದೆ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ನಾನು ಆದುಕೊಂಡ ಯೆರೂಸಲೇಮಿಗೋಸ್ಕರವಾಗಿಯೂ ನಿನ್ನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು ಅಂದನು.

14ಆಗ ಕರ್ತನು ಎದೋಮ್ಯನಾದ ಹದದನನ್ನು ಸೊಲೊಮೋನನಿಗೆ ಶತ್ರುವಾಗಿರಲು ಎಬ್ಬಿಸಿದನು.

15ಅವನು ಎದೋಮಿನಲ್ಲಿ ಅರಸನ ಸಂತತಿಯವನಾಗಿದ್ದನು. ಹೇಗಂದರೆ, ದಾವೀದನು ಎದೋಮಿನಲ್ಲಿ ರುವಾಗ ಸೈನ್ಯಾಧಿಪತಿಯಾದ ಯೋವಾಬನು ಎದೋ ಮಿನಲ್ಲಿ ಗಂಡಸರೆಲ್ಲರನ್ನೂ ಕೊಂದುಹಾಕಿದ ತರು ವಾಯ

16ಕೊಂದು ಹಾಕಲ್ಪಟ್ಟವರನ್ನು ಹೂಣಿಡಲು ಹೋದಾಗ ಹದದನು ಇನ್ನೂ ಚಿಕ್ಕ ಹುಡುಗನಾಗಿದ್ದು ಅವನೂ ಅವನ ಸಂಗಡ ಅವನ ತಂದೆಯ ಸೇವಕ ರಾದ ಎದೋಮ್ಯರಲ್ಲಿ ಕೆಲವರೂ ಗುಪ್ತದಲ್ಲಿ ಪ್ರವೇಶಿಸಲು ಓಡಿಹೋದರು.

೧ ಅರಸುಗಳು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी