ಆದರೆ ಶೆಕೆಮಿನ ಗೋಪುರದಲ್ಲಿದ್ದ ಜನರೆಲ್ಲರೂ ಅಲ್ಲಿ ಕೂಡಿದ್ದಾರೆಂದು ಅಬೀಮೆಲೆಕನಿಗೆ ತಿಳಿಸಲ್ಪಟ್ಟಾಗ
45ಅಬೀಮೆಲೆಕನು ಆ ದಿನವೆಲ್ಲಾ ಪಟ್ಟಣದ ಮೇಲೆ ಯುದ್ಧಮಾಡಿ ಪಟ್ಟಣವನ್ನು ಹಿಡಿದು ಅದರಲ್ಲಿದ್ದ ಜನ ವನ್ನು ಕೊಂದು ಪಟ್ಟಣವನ್ನು ಕೆಡವಿಬಿಟ್ಟು ಅದರಲ್ಲಿ ಉಪ್ಪು ಎರಚಿಬಿಟ್ಟನು.
46ಅದನ್ನು ಶೆಕೆಮಿನ ಗೋಪುರ ದಲ್ಲಿದ್ದ ಜನರೆಲ್ಲರೂ ಕೇಳಿದಾಗ ಅವರು ಬೆರೀತೆಂಬ ದೇವರ ಮನೆಯ ಭದ್ರವಾದ ಸ್ಥಳದಲ್ಲಿ ಪ್ರವೇಶಿಸಿದರು.
47ಆದರೆ ಶೆಕೆಮಿನ ಗೋಪುರದಲ್ಲಿದ್ದ ಜನರೆಲ್ಲರೂ ಅಲ್ಲಿ ಕೂಡಿದ್ದಾರೆಂದು ಅಬೀಮೆಲೆಕನಿಗೆ ತಿಳಿಸಲ್ಪಟ್ಟಾಗ
48ಅಬೀಮೆಲೆಕನು ತನ್ನ ಸಂಗಡ ಇದ್ದ ಜನರೆಲ್ಲರ ಸಹಿತವಾಗಿ ಚಲ್ಮೊನ್ ಬೆಟ್ಟವನ್ನೇರಿ ತನ್ನ ಕೈಯಲ್ಲಿ ಕೊಡಲಿಯನ್ನು ಹಿಡಿದು ಒಂದು ಮರದ ಕೊಂಬೆಯನ್ನು ಕಡಿದು ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು ತನ್ನ ಕೂಡ ಇದ್ದ ಜನರಿಗೆ--ನಾನು ಮಾಡಿದ್ದನ್ನು ನೋಡಿ ಹಾಗೆಯೇ ತೀವ್ರವಾಗಿ ಮಾಡಿರಿ ಅಂದನು.
49ಜನರಲ್ಲಿ ಪ್ರತಿಯೊಬ್ಬನು ಒಂದೊಂದು ಕೊಂಬೆ ಯನ್ನು ಕಡಿದು ಅಬೀಮೆಲೆಕನ ಹಿಂದೆ ಹೋಗಿ ಅವುಗಳನ್ನು ಆ ಭದ್ರವಾದ ಸ್ಥಳಕ್ಕೆ ಹಾಕಿ ಅದಕ್ಕೆ ಬೆಂಕಿಯನ್ನು ಹಚ್ಚಿದರು. ಆಗ ಶೆಕೆಮಿನ ಗೋಪುರ ದಲ್ಲಿರುವವರೆಲ್ಲರೂ ಹೆಚ್ಚು ಕಡಿಮೆ ಸಾವಿರ ಸ್ತ್ರೀ ಪುರುಷರು ಸತ್ತರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ