೧ ಅರಸುಗಳು 2:38

ಶಿಮ್ಮಿ ಅರಸನಿಗೆ--ನಿನ್ನ ಮಾತು ಒಳ್ಳೇದು; ಅರಸನಾದ ನನ್ನ ಒಡೆಯನು ಹೇಳಿದ ಪ್ರಕಾರವೇ ನಿನ್ನ ಸೇವಕನು ಮಾಡುವನು ಅಂದನು. ಶಿಮ್ಮಿ ಯೆರೂಸಲೇಮಿನಲ್ಲಿ ಬಹಳ ದಿವಸ ವಾಸವಾಗಿದ್ದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 2

36ಅರಸನು ಶಿಮ್ಮಿಯನ್ನು ಕರೆಕಳುಹಿಸಿ ಅವನಿಗೆ--ನೀನು ಯೆರೂಸಲೇಮಿನಲ್ಲಿ ನಿನಗೆ ಮನೆಯನ್ನು ಕಟ್ಟಿಸಿ ಕೊಂಡು ಅಲ್ಲಿಂದ ಎಲ್ಲಿಗೂ ಹೋಗದೆ ವಾಸವಾಗಿರು.

37ಯಾವ ದಿನದಲ್ಲಿ ನೀನು ಹೊರಟು ಕಿದ್ರೋನೆಂಬ ಹಳ್ಳವನ್ನು ದಾಟುವಿಯೋ ಆ ದಿನದಲ್ಲಿ ನಿಶ್ಚಯವಾಗಿ ಸಾಯುವಿ ಎಂದು ಖಂಡಿತಾ ತಿಳಿದುಕೋ. ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರುವದು ಅಂದನು.

38ಶಿಮ್ಮಿ ಅರಸನಿಗೆ--ನಿನ್ನ ಮಾತು ಒಳ್ಳೇದು; ಅರಸನಾದ ನನ್ನ ಒಡೆಯನು ಹೇಳಿದ ಪ್ರಕಾರವೇ ನಿನ್ನ ಸೇವಕನು ಮಾಡುವನು ಅಂದನು. ಶಿಮ್ಮಿ ಯೆರೂಸಲೇಮಿನಲ್ಲಿ ಬಹಳ ದಿವಸ ವಾಸವಾಗಿದ್ದನು.

39ಮೂರು ವರುಷ ಗಳ ಅಂತ್ಯದಲ್ಲಿ ಏನಾಯಿತಂದರೆ, ಶಿಮ್ಮಿಯ ಸೇವಕರಲ್ಲಿ ಇಬ್ಬರು ಗತ್‌ ಅರಸನಾದ ಮಾಕನ ಮಗನಾದ ಆಕೀಷನ ಬಳಿಗೆ ಓಡಿಹೋದರು. ಆಗ ಶಿಮ್ಮಿಗೆಇಗೋ, ನಿನ್ನ ಸೇವಕರು ಗತ್‌ನಲ್ಲಿದ್ದಾರೆಂದು ತಿಳಿಸಿ ದರು.

40ಆದದರಿಂದ ಶಿಮ್ಮಿ ಎದ್ದು ತನ್ನ ಕತ್ತೆಗೆ ತಡಿಯನ್ನು ಹಾಕಿಸಿ ತನ್ನ ಸೇವಕರನ್ನು ಹುಡುಕಲು ಗತ್‌ನಲ್ಲಿರುವ ಆಕೀಷನ ಬಳಿಗೆ ಹೋದನು. ಶಿಮ್ಮಿ ಹೋಗಿ ಗತ್‌ನಿಂದ ತನ್ನ ಸೇವಕರನ್ನು ಕರಕೊಂಡು ಬಂದನು.

೧ ಅರಸುಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी