ಕರ್ತನು ಮೋಶೆಯೊಂದಿಗೆ ಮಾತನಾಡಿ--
12ತರುವಾಯ ಅವನು ಅದನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಜ್ಞಾಪಕಾರ್ಥವಾಗಿ ಅದರಿಂದ ತನ್ನ ಹಿಡಿ ಯಷ್ಟು ತೆಗೆದುಕೊಂಡು ಕರ್ತನಿಗೆ ಯಜ್ಞವೇದಿಯ ಮೇಲೆ ಬೆಂಕಿಯ ಅರ್ಪಣೆಗಳಿಗನುಸಾರವಾಗಿ ಸುಡ ಬೇಕು; ಅದು ಪಾಪದ ಬಲಿಯಾಗಿರುವದು.
13ಇವು ಗಳಲ್ಲಿ ಒಂದನ್ನು ಪಾಪದ ವಿಷಯವಾಗಿ ಯಾಜಕನು ಅವನಿಗೋಸ್ಕರ ಪ್ರಾಯಶ್ಚಿತ್ತಮಾಡಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು ಮತ್ತು ಉಳಿದದ್ದು ಯಾಜಕನಿಗೋಸ್ಕರ ಆಹಾರಬಲಿಯಾಗಿ ಇರುವದು ಅಂದನು.
14ಕರ್ತನು ಮೋಶೆಯೊಂದಿಗೆ ಮಾತನಾಡಿ--
15ಯಾವನಾದರೂ ಅತಿಕ್ರಮಿಸಿ ಕರ್ತನ ಪರಿಶುದ್ಧ ವಾದವುಗಳನ್ನು ಅರಿಯದೆ ಪಾಪಮಾಡಿದ್ದರೆ ಅವನು ತನ್ನ ಅತಿಕ್ರಮಕ್ಕಾಗಿ ತನ್ನ ಹಿಂಡುಗಳಿಂದ ದೋಷವಿಲ್ಲದ ಟಗರನ್ನು ನಿನ್ನ ಅಂದಾಜಿನ ಪ್ರಕಾರ ಪವಿತ್ರ ಸ್ಥಳದ ಶೆಕೆಲುಗಳಿಗನುಸಾರವಾಗಿ ಬೆಳ್ಳಿಯ ಶೆಕೆಲುಗಳನ್ನು ಅತಿ ಕ್ರಮದ ಬಲಿಗಾಗಿ ಕರ್ತನಿಗೆ ತರಬೇಕು.
16ಪರಿಶುದ್ಧ ವಾದದ್ದಲ್ಲದೆ ಮಾಡಿದ ಕೇಡಿಗೆ ಬದಲು ಕೊಟ್ಟು ಅದಕ್ಕೆ ಐದನೇ ಪಾಲನ್ನು ಕೂಡಿಸಿ ಅದನ್ನು ಯಾಜಕನಿಗೆ ಕೊಡಬೇಕು, ಯಾಜಕನು ಅವನಿಗಾಗಿ ಅತಿಕ್ರಮದ ಬಲಿಯಾದ ಟಗರಿನಿಂದ ಪ್ರಾಯಶ್ಚಿತ್ತಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ