ಯೋಬನು 42:13

ಅವನಿಗೆ ಏಳು ಕುಮಾರರೂ ಮೂರು ಕುಮಾರ್ತೆ ಯರೂ ಇದ್ದರು.

ಸಂದರ್ಭದೊಂದಿಗೆ ಓದಿ · ಯೋಬನು 42

11ಆಗ ಅವನ ಸಹೋದರರೆಲ್ಲರೂ ಅವನ ಸಹೋದರಿಯರೆಲ್ಲರೂ ಮುಂಚಿನ ಅವನ ಪರಿಚಿತಿಯವರೆಲ್ಲರೂ ಅವನ ಬಳಿಗೆ ಬಂದು ಅವನ ಸಂಗಡ ಅವನ ಮನೆಯಲ್ಲಿ ರೊಟ್ಟಿ ತಿಂದು, ಕರ್ತನು ಅವನ ಮೇಲೆ ಬರಮಾಡಿದ ಎಲ್ಲಾ ಕೇಡಿಗೋಸ್ಕರ ಅವನ ಸಂಗಡ ದುಃಖಪಟ್ಟು ಅವನನ್ನು ಸಂತೈಸಿದರು. ಅವರು ಅವನಿಗೆ ಪ್ರತಿ ಮನುಷ್ಯನು ಒಂದು ಹಣವನ್ನೂ ಬಂಗಾರದ ಒಂದು ಉಂಗುರವನ್ನೂ ಕೊಟ್ಟರು.

12ಇದಲ್ಲದೆ ಕರ್ತನು ಯೋಬನ ಆರಂಭಕ್ಕಿಂತ ಅವನ ಅಂತ್ಯವನ್ನು ಆಶೀರ್ವದಿಸಿದನು. ಅವನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಸಾವಿರ ಜೋಡಿ ಎತ್ತುಗಳೂ ಸಾವಿರ ಹೆಣ್ಣು ಕತ್ತೆಗಳೂ ಇದ್ದವು.

13ಅವನಿಗೆ ಏಳು ಕುಮಾರರೂ ಮೂರು ಕುಮಾರ್ತೆ ಯರೂ ಇದ್ದರು.

14ಅವನು ಮೊದಲನೆಯವಳಿಗೆ ಯೆವಿಾಮಳೆಂದೂ ಎರಡನೆಯವಳಿಗೆ ಕೆಚೀಯ ಳೆಂದೂ ಮೂರನೆಯವಳಿಗೆ ಕರನ್ಹಪ್ಪ್ಪೂಕೆಂದೂ ಹೆಸ ರಿಟ್ಟನು.

15ಯೋಬನ ಕುಮಾರ್ತೆಯರ ಹಾಗೆ ಸೌಂದರ್ಯವತಿಯರಾದ ಸ್ತ್ರೀಯರು ದೇಶದಲ್ಲೆಲ್ಲಾ ಕಾಣಲಿಲ್ಲ; ಅವರ ತಂದೆ ಅವರ ಸಹೋದರರ ಮಧ್ಯದಲ್ಲಿ ಅವರಿಗೆ ಬಾಧ್ಯತೆಯನ್ನು ಕೊಟ್ಟನು.

ಯೋಬನು 42 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी