ಯೆಹೆಜ್ಕೇಲನು 6:10

ನಾನೇ ಕರ್ತನೆಂದೂ ನಾನು ಈ ಕೇಡನ್ನು ಮಾಡುತ್ತಿರುವೆನೆಂದೂ ನಾನು ವ್ಯರ್ಥವಾಗಿ ಹೇಳುವದಿಲ್ಲವೆಂದೂ ತಿಳಿದುಕೊಳ್ಳುವರು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 6

8ಆದಾಗ್ಯೂ ನೀವು ದೇಶಗಳಲ್ಲಿ ಚದರಿಹೋಗುವಾಗ ಜನಾಂಗಗಳೊಳಗೆ ಕತ್ತಿ ಬೀಸಿದಾಗ ತಪ್ಪಿಸಿಕೊಳ್ಳು ವವರು ನಿಮ್ಮಲ್ಲಿರುವ ಹಾಗೆ ಕೆಲವರನ್ನು ಉಳಿಸುತ್ತೇನೆ.

9ನಿಮ್ಮಲ್ಲಿ ತಪ್ಪಿಸಿಕೊಂಡವರು ತಾವು ಸೆರೆಗೆ ಒಯ್ಯಲ್ಪ ಡುವ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳು ವರು, ಯಾಕಂದರೆ ನನ್ನನ್ನು ಬಿಟ್ಟುಬಿಡುವ ಅವರ ಜಾರಹೃದಯದಿಂದಲೂ ಅವರ ದೇವರ ವಿಗ್ರಹಗಳ ಹಿಂದೆ ಜಾರತ್ವ ಮಾಡುವವರ ಕಣ್ಣುಗಳಿಂದಲೂ ಮುರಿದುಹೋದೆನು; ಅವರು ತಮ್ಮ ಅಸಹ್ಯಗಳಲ್ಲಿ ಮಾಡುವ ಕೇಡುಗಳ ನಿಮಿತ್ತ ತಮಗೆ ತಾವೇ ಹೇಸಿ ಕೊಳ್ಳುವರು.

10ನಾನೇ ಕರ್ತನೆಂದೂ ನಾನು ಈ ಕೇಡನ್ನು ಮಾಡುತ್ತಿರುವೆನೆಂದೂ ನಾನು ವ್ಯರ್ಥವಾಗಿ ಹೇಳುವದಿಲ್ಲವೆಂದೂ ತಿಳಿದುಕೊಳ್ಳುವರು.

11ದೇವರಾದ ಕರ್ತನು ಹೇಳುವದೇನಂದರೆ; ನಿನ್ನ ಕೈಯಿಂದ ಬಡಿದು ನಿನ್ನ ಪಾದದಿಂದ ತುಳಿದು ಹೇಳ ಬೇಕಾದದ್ದೇನಂದರೆ--ಮನೆಯವರ ಸಮಸ್ತ ಕೆಟ್ಟ ಅಸಹ್ಯಗಳೇ ಅಯ್ಯೋ, ಅವರು ಕತ್ತಿಯಿಂದಲೂ ಬರ ದಿಂದಲೂ ಮತ್ತು ವ್ಯಾಧಿಗಳಿಂದಲೂ ಬೀಳುವರು.

12ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು; ಹತ್ತಿರದಲ್ಲಿರುವವನು ಕತ್ತಿಯಿಂದ ಬೀಳುವನು; ಉಳಿದು ಮುತ್ತಿಗೆಯಲ್ಲಿರುವವನು ಬರದಿಂದ ಸಾಯುವನು; ಹೀಗೆ ನಾನು ಅವರ ಮೇಲೆ ನನ್ನ ಉಗ್ರತೆಯನ್ನು ತೀರಿಸಿಕೊಳ್ಳುವೆನು.

ಯೆಹೆಜ್ಕೇಲನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी