ಲೂಕನು 17:27

ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು.

ಸಂದರ್ಭದೊಂದಿಗೆ ಓದಿ · ಲೂಕನು 17

25ಆದರೆ ಆತನು ಮೊದಲು ಅನೇಕ ಶ್ರಮೆಗಳನ್ನು ಅನುಭವಿಸಿ ಈ ಸಂತತಿಯವರಿಂದ ತಿರಸ್ಕರಿಸಲ್ಪಡುವದು ಅಗತ್ಯವಾ ಗಿದೆ.

26ನೋಹನ ದಿವಸಗಳಲ್ಲಿ ಹೇಗೆ ಇತ್ತೋ ಅದೇ ರೀತಿಯಲ್ಲಿ ಮನುಷ್ಯಕುಮಾರನ ದಿವಸಗಳಲ್ಲಿಯೂ ಇರುವದು.

27ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು.

28ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.

29ಆದರೆ ಲೋಟನು ಸೊದೋಮಿನಿಂದ ಹೊರಗೆ ಹೋದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಪಡಿಸಿದವು.

ಲೂಕನು 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी