ಹಾಗಾದರೇನು? ನಾವು ನ್ಯಾಯಪ್ರಮಾಣಾ ಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ? ಹಾಗೆ ಎಂದಿಗೂ ಅಲ್ಲ.
13ಇಲ್ಲವೆ ನೀವು ನಿಮ್ಮ ಅಂಗಗಳನ್ನು ಪಾಪಕ್ಕೆ ಒಳಪಡಿಸುವವರಾಗಿದ್ದು ಅನೀತಿಯನ್ನು ನಡಿಸುವ ಸಾಧನಗಳಾಗಮಾಡಬೇಡಿರಿ; ಆದರೆ ಸತ್ತವರೊಳಗಿಂದ ಜೀವಿಸುವವರೋ ಎಂಬಂತೆ ನೀತಿಕಾರ್ಯಗಳನ್ನು ನಡಿಸುವ ಸಾಧನಗಳನ್ನಾಗಿ ನಿಮ್ಮ ಅಂಗಗಳನ್ನು ದೇವರಿಗೆ ಒಳಪಡಿಸಿರಿ.
14ಯಾಕಂದರೆ ಪಾಪವು ನಿಮ್ಮ ಮೇಲೆ ಪ್ರಭುತ್ವ ನಡಿಸಬಾರದು; ಕಾರಣವೇನಂದರೆ ನೀವು ನ್ಯಾಯಪ್ರಮಾಣಾಧೀನ ರಲ್ಲ, ಕೃಪೆಗೆ ಅಧೀನರಾಗಿದ್ದೀರಿ.
15ಹಾಗಾದರೇನು? ನಾವು ನ್ಯಾಯಪ್ರಮಾಣಾ ಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ? ಹಾಗೆ ಎಂದಿಗೂ ಅಲ್ಲ.
16ನೀವು ಯಾರಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತಿರೋ ಅವರಿಗೆ ದಾಸರಾಗಿಯೇ ವಿಧೇ ಯರಾಗಿರುವಿರೆಂಬದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ; ಇಲ್ಲವೆ ವಿಧೇಯತ್ವಕ್ಕೆ ದಾಸ ರಾದರೆ ನೀತಿಯೇ.
17ಆದರೆ ನೀವು ಪಾಪಕ್ಕೆ ದಾಸ ರಾಗಿದ್ದರೂ ನಿಮಗೆ ಒಪ್ಪಿಸಲ್ಪಟ್ಟ ಬೋಧನೆಗೆ ನೀವು ಹೃದಯಪೂರ್ವಕವಾಗಿ ಅಧೀನರಾದದರಿಂದ ದೇವ ರಿಗೆ ಸ್ತೋತ್ರವಾಗಲಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ