ಅಪೊಸ್ತಲರ ಕೃತ್ಯಗಳು 21:22

ಆದದರಿಂದ ಏನು ಮಾಡಬೇಕು? ಸಮೂಹವು ಕೂಡಿಬರುವದು ಅವಶ್ಯವಾಗಿದೆ; ನೀನು ಇಲ್ಲಿಗೆ ಬಂದಿದ್ದೀ ಎಂದು ಅವರಿಗೆ ಗೊತ್ತಾಗುವದು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 21

20ಅವರು ಅದನ್ನು ಕೇಳಿ ಕರ್ತನನ್ನು ಮಹಿಮೆಪಡಿಸಿ ಅವನಿಗೆ--ಸಹೋದರನೇ, ವಿಶ್ವಾಸಿ ಗಳಾದ ಯೆಹೂದ್ಯರು ಎಷ್ಟೋ ಸಾವಿರ ಮಂದಿ ಇದ್ದಾರೆಂಬದನ್ನು ನೀನು ನೋಡುತ್ತೀಯಲ್ಲಾ. ಅವರೆಲ್ಲರೂ ನ್ಯಾಯಪ್ರಮಾಣದ ವಿಷಯದಲ್ಲಿ ಅಭಿಮಾನವುಳ್ಳವರಾಗಿದ್ದಾರೆ.

21ಅವರು ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬಾರದೆಂದೂ ಆಚಾರಗಳ ಪ್ರಕಾರ ನಡೆಯಬಾರದೆಂದೂ ಹೇಳುತ್ತಾ ಮೋಶೆ ಬರೆದದ್ದನ್ನು ತ್ಯಜಿಸಬೇಕೆಂದು ಅನ್ಯಜನರಲ್ಲಿರುವ ಯೆಹೂದ್ಯರಿಗೆ ನೀನು ಬೋಧಿಸುತ್ತಿದ್ದೀ ಎಂಬದಾಗಿ ನಿನ್ನ ವಿಷಯದಲ್ಲಿ ಅವರು ಕೇಳಿದ್ದಾರೆ.

22ಆದದರಿಂದ ಏನು ಮಾಡಬೇಕು? ಸಮೂಹವು ಕೂಡಿಬರುವದು ಅವಶ್ಯವಾಗಿದೆ; ನೀನು ಇಲ್ಲಿಗೆ ಬಂದಿದ್ದೀ ಎಂದು ಅವರಿಗೆ ಗೊತ್ತಾಗುವದು.

23ಆದಕಾರಣ ನಾವು ನಿನಗೆ ಹೇಳುವದನ್ನು ಮಾಡು; ನಮ್ಮಲ್ಲಿ ಪ್ರಮಾಣ ಮಾಡಿದ ನಾಲ್ಕು ಮಂದಿ ಇದ್ದಾರೆ.

24ನೀನು ಅವರನ್ನು ಕರೆದುಕೊಂಡು ಹೋಗಿ ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವಂತೆ ನೀನೂ ಅವ ರೊಂದಿಗೆ ನಿನ್ನನ್ನು ಶುದ್ಧಮಾಡಿಕೊಂಡು ಅವರಿ ಗೋಸ್ಕರ ವೆಚ್ಚಮಾಡು; ಆಗ ನಿನ್ನ ವಿಷಯವಾಗಿ ಅವರು ಕೇಳಿದವುಗಳು ಏನೂ ಅಲ್ಲವೆಂದೂ ನೀನು ಸಹ ಕ್ರಮವಾಗಿ ನಡೆಯುತ್ತಾ ನ್ಯಾಯಪ್ರಮಾಣ

ಅಪೊಸ್ತಲರ ಕೃತ್ಯಗಳು 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी