ಲೂಕನು 8:18

ಆದದರಿಂದ ನೀವು ಕೇಳುವವುಗಳ ವಿಷಯದಲ್ಲಿ ಎಚ್ಚರಿಕೆ ತಂದುಕೊಳ್ಳಿರಿ. ಯಾಕಂದರೆ ಇದ್ದವನಿಗೆ ಕೊಡಲ್ಪಡುವದು; ಇಲ್ಲದವನಿಗೆ ತನಗೆ ಉಂಟೆಂದು ನೆನಸುವದನ್ನೂ ಅವನಿಂದ ತೆಗೆಯಲ್ಪ ಡುವದು ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಲೂಕನು 8

16ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆ ಯಿಂದ ಮುಚ್ಚುವದಿಲ್ಲ; ಇಲ್ಲವೆ ಮಂಚದ ಕೆಳಗೆ ಇಡುವದಿಲ್ಲ; ಆದರೆ ಒಳಗೆ ಪ್ರವೇಶಿಸುವವರು ಬೆಳಕನ್ನು ನೋಡುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.

17ಪ್ರಕಟವಾಗದೆ ಮರೆಯಾಗಿ ರುವಂತದ್ದು ಒಂದೂ ಇರುವದಿಲ್ಲ ತಿಳಿಯಲ್ಪಡದೆಯೂ ಬೈಲಿಗೆ ಬಾರದೆಯೂ ಇರುವ ರಹಸ್ಯವು ಯಾವದೂ ಇಲ್ಲ.

18ಆದದರಿಂದ ನೀವು ಕೇಳುವವುಗಳ ವಿಷಯದಲ್ಲಿ ಎಚ್ಚರಿಕೆ ತಂದುಕೊಳ್ಳಿರಿ. ಯಾಕಂದರೆ ಇದ್ದವನಿಗೆ ಕೊಡಲ್ಪಡುವದು; ಇಲ್ಲದವನಿಗೆ ತನಗೆ ಉಂಟೆಂದು ನೆನಸುವದನ್ನೂ ಅವನಿಂದ ತೆಗೆಯಲ್ಪ ಡುವದು ಎಂದು ಹೇಳಿದನು.

19ತರುವಾಯ ಆತನ ತಾಯಿಯೂ ಆತನ ಸಹೋದರರೂ ಆತನಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಆತನ ಬಳಿಗೆ ಹೋಗಲಾರದೆ ಇದ್ದರು.

20ಆಗ ಒಬ್ಬನು ಆತನಿಗೆ--ನಿನ್ನ ತಾಯಿಯೂ ನಿನ್ನ ಸಹೋದರರೂ ನಿನ್ನನ್ನು ನೋಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ ಅಂದನು.

ಲೂಕನು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी