ಆದಿಕಾಂಡ 46:6

ಅವರು ತಮ್ಮ ದನಗಳನ್ನೂ ಕಾನಾನ್‌ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತಕ್ಕೊಂಡು ಐಗುಪ್ತಕ್ಕೆ ಬಂದರು. ಯಾಕೋಬನು ತನ್ನ ಎಲ್ಲಾ ಸಂತತಿಯೊಂದಿಗೆ ಬಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 46

4ನಾನು ನಿನ್ನ ಸಂಗಡ ಐಗುಪ್ತಕ್ಕೆ ಹೋಗುವೆನು. ನಾನೇ ನಿಶ್ಚಯವಾಗಿ ನಿನ್ನನ್ನು ಮೇಲಕ್ಕೆ (ಕಾನಾನಿಗೆ) ತಿರಿಗಿ ಬರಮಾಡುವೆನು. ಯೋಸೇಫನು ನಿನ್ನ ಕಣ್ಣುಗಳ ಮೇಲೆ ತನ್ನ ಕೈ ಇಡುವನು ಅಂದನು.

5ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಇಸ್ರಾಯೇಲನ ಮಕ್ಕಳು ತಮ್ಮ ತಂದೆಯಾದ ಯಾಕೋಬನನ್ನೂ ತಮ್ಮ ಚಿಕ್ಕವರನ್ನೂ ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ಬಂಡಿಗಳ ಮೇಲೆ ಏರಿಸಿಕೊಂಡು ಹೋದರು.

6ಅವರು ತಮ್ಮ ದನಗಳನ್ನೂ ಕಾನಾನ್‌ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತಕ್ಕೊಂಡು ಐಗುಪ್ತಕ್ಕೆ ಬಂದರು. ಯಾಕೋಬನು ತನ್ನ ಎಲ್ಲಾ ಸಂತತಿಯೊಂದಿಗೆ ಬಂದನು.

7ತನ್ನ ಕುಮಾರ ರನ್ನೂ ಕುಮಾರರ ಕುಮಾರರನ್ನೂ ಕುಮಾರ್ತೆಯರನ್ನೂ ಕುಮಾರರ ಕುಮಾರ್ತೆಯರನ್ನೂ ಅಂತೂ ತನ್ನ ಸಂತತಿ ಯನ್ನೆಲ್ಲಾ ತನ್ನೊಂದಿಗೆ ಐಗುಪ್ತಕ್ಕೆ ಕರಕೊಂಡು ಬಂದನು.

8ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು.

ಆದಿಕಾಂಡ 46 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी