ವಿಮೋಚನಕಾಂಡ 18:7

ಮೋಶೆಯು ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 18

5ಮೋಶೆಯ ಮಾವ ನಾದ ಇತ್ರೋವನ ಸಂಗಡ ಮೋಶೆಯ ಕುಮಾರರೂ ಅವನ ಹೆಂಡತಿಯೂ ಮೋಶೆಯ ಬಳಿಗೆ ಅರಣ್ಯಕ್ಕೆ ಅವನು ತಂಗಿದ್ದ ಸ್ಥಳವಾದ ದೇವರ ಬೆಟ್ಟದ ಬಳಿ ಬಂದರು.

6ಆಗ ಅವನು ಮೋಶೆಗೆ--ನಿನ್ನ ಮಾವ ನಾದ ಇತ್ರೋವನೆಂಬ ನಾನು ನಿನ್ನ ಹೆಂಡತಿಯನ್ನೂ ಅವಳ ಇಬ್ಬರು ಮಕ್ಕಳನ್ನೂ ಕರೆದುಕೊಂಡು ನಿನ್ನ ಬಳಿಗೆ ಬಂದಿದ್ದೇನೆಂದು ಹೇಳಿ ಕಳುಹಿಸಿದಾಗ

7ಮೋಶೆಯು ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು.

8ಇಸ್ರಾಯೇಲ್ಯರಿಗೋಸ್ಕರ ಕರ್ತನು ಫರೋಹ ನಿಗೂ ಐಗುಪ್ತ್ಯರಿಗೂ ಮಾಡಿದ್ದೆಲ್ಲವನ್ನೂ ಅವರಿಗೆ ಒದಗಿದ ಎಲ್ಲಾ ಸಂಕಟವನ್ನೂ ಕರ್ತನು ತಮ್ಮನ್ನು ಹೇಗೆ ತಪ್ಪಿಸಿದನೆಂಬದನ್ನೂ ಮೋಶೆಯು ತನ್ನ ಮಾವ ನಿಗೆ ತಿಳಿಯಪಡಿಸಿದನು.

9ಇದಲ್ಲದೆ ಕರ್ತನು ಇಸ್ರಾ ಯೇಲ್ಯರಿಗೆ ಮಾಡಿದ ಎಲ್ಲಾ ಉಪಕಾರಕ್ಕಾಗಿಯೂ ಆತನು ಅವರನ್ನು ಐಗುಪ್ತ್ಯರ ಕೈಗಳಿಂದ ತಪ್ಪಿಸಿದ್ದ ಕ್ಕಾಗಿಯೂ ಇತ್ರೋವನು ಸಂತೋಷಪಟ್ಟನು.

ವಿಮೋಚನಕಾಂಡ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी