೧ ಪೂರ್ವಕಾಲವೃತ್ತಾಂತ 5:1

ಇಸ್ರಾಯೇಲಿನ ಚೊಚ್ಚಲ ಮಗನಾದ ರೂಬೇನನ ಕುಮಾರರು (ರೂಬೇನನು ಚೊಚ್ಚಲ ಮಗನಾಗಿದ್ದನು; ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರಮಾಡಿದ್ದರಿಂದ ಅವನ ಚೊಚ್ಚಲತನದ ಹಕ್ಕು ಇಸ್ರಾಯೇಲನ ಮಗ ನಾದ ಯೋಸೇಫನ ಕುಮಾರರಿಗೆ ಕೊಡಲ್ಪಟ್ಟಿತು. ಆದದರಿಂದ ಈ ವಂಶಾವಳಿಯು ಚೊಚ್ಚಲತನದ ಪ್ರಕಾರ ಬರೆಯಲ್ಪಟ್ಟದ್ದಲ್ಲ.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 5

1ಇಸ್ರಾಯೇಲಿನ ಚೊಚ್ಚಲ ಮಗನಾದ ರೂಬೇನನ ಕುಮಾರರು (ರೂಬೇನನು ಚೊಚ್ಚಲ ಮಗನಾಗಿದ್ದನು; ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರಮಾಡಿದ್ದರಿಂದ ಅವನ ಚೊಚ್ಚಲತನದ ಹಕ್ಕು ಇಸ್ರಾಯೇಲನ ಮಗ ನಾದ ಯೋಸೇಫನ ಕುಮಾರರಿಗೆ ಕೊಡಲ್ಪಟ್ಟಿತು. ಆದದರಿಂದ ಈ ವಂಶಾವಳಿಯು ಚೊಚ್ಚಲತನದ ಪ್ರಕಾರ ಬರೆಯಲ್ಪಟ್ಟದ್ದಲ್ಲ.

2ಯೆಹೂದನು ತನ್ನ ಸಹೋದರರಿಗಿಂತ ಪ್ರಬಲವುಳ್ಳವನಾದನು. ಅವ ನಿಂದ ಮುಖ್ಯ ಅಧಿಕಾರಿಯು ಹುಟ್ಟಿದನು. ಆದರೆ ಚೊಚ್ಚಲತನ ಯೋಸೆಫನದಾಗಿತ್ತು).

3ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ಕುಮಾರರು; ಹನೋ ಕನು ಫಲ್ಲೂ ಹೆಚ್ರೋನನು ಕರ್ವಿಾಯು.

೧ ಪೂರ್ವಕಾಲವೃತ್ತಾಂತ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी