೧ ಅರಸುಗಳು 8:37

ದೇಶದಲ್ಲಿ ಬರವೂ ಉರಿಗಾಳಿಯೂ ಕಾಡಿ ಗೆಯೂ ಬಾಣತಿ ರೋಗವಾದರೂ ಮಿಡಿತೆಯಾದರೂ ಕಂಬಳಿ ಹುಳವಾದರೂ ಅವರ ಶತ್ರುಗಳು ಅವರ ಸ್ವದೇಶದ ಪಟ್ಟಣಗಳಲ್ಲಿ ಅವರನ್ನು ಹಿಂಸಿಸಿದರೂ ಯಾವ ಬಾಧೆ, ಯಾವ ಬೇನೆ ಇದ್ದರೂ

ಸಂದರ್ಭದೊಂದಿಗೆ ಓದಿ · ೧ ಅರಸುಗಳು 8

35ಅವರು ನಿನಗೆ ವಿರೋಧವಾಗಿ ಪಾಪವನ್ನು ಮಾಡಿದ ಕಾರಣ ಆಕಾಶವು ಮುಚ್ಚಲ್ಪಟ್ಟು ಮಳೆ ಇಲ್ಲದಿರುವಾಗ ನೀನು ಅವರನ್ನು ಕುಂದಿಸಿದ್ದರಿಂದ ಅವರು ಈ ಸ್ಥಳದ ಕಡೆಗೆ ಪ್ರಾರ್ಥನೆಮಾಡಿ ನಿನ್ನ ನಾಮವನ್ನು ಅರಿಕೆಮಾಡಿ ತಮ್ಮ ಪಾಪದಿಂದ ತಿರುಗಿ ಕೊಂಡರೆ

36ಆಗ ನೀನು ಪರಲೋಕದಿಂದ ಕೇಳಿ ನಿನ್ನ ಸೇವಕರಾದ ಇಸ್ರಾಯೇಲ್‌ ಜನರ ಪಾಪವನ್ನು ಮನ್ನಿಸಿ ಅವರು ನಡಿಯಬೇಕಾದ ಸನ್ಮಾರ್ಗವನ್ನು ಅವರಿಗೆ ಕಲಿಸುವ ಹಾಗೆ ನಿನ್ನ ಜನರಿಗೆ ಬಾಧ್ಯತೆಯಾಗಿ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡು.

37ದೇಶದಲ್ಲಿ ಬರವೂ ಉರಿಗಾಳಿಯೂ ಕಾಡಿ ಗೆಯೂ ಬಾಣತಿ ರೋಗವಾದರೂ ಮಿಡಿತೆಯಾದರೂ ಕಂಬಳಿ ಹುಳವಾದರೂ ಅವರ ಶತ್ರುಗಳು ಅವರ ಸ್ವದೇಶದ ಪಟ್ಟಣಗಳಲ್ಲಿ ಅವರನ್ನು ಹಿಂಸಿಸಿದರೂ ಯಾವ ಬಾಧೆ, ಯಾವ ಬೇನೆ ಇದ್ದರೂ

38ನಿನ್ನ ಜನರಾದ ಸಮಸ್ತ ಇಸ್ರಾಯೇಲಿನ ಯಾವ ಮನುಷ್ಯ ನಾದರೂ ಯಾವ ಪ್ರಾರ್ಥನೆಯನ್ನಾದರೂ ವಿಜ್ಞಾಪನೆ ಯನ್ನಾದರೂ ಮಾಡಿದರೆ ತನ್ನ ಸ್ವಂತ ಹೃದಯದ ಬಾಧೆಯನ್ನು ತಿಳಿದು

39ಈ ಮಂದಿರದ ಕಡೆಗೆ ತನ್ನ ಕೈಗಳನ್ನು ಚಾಚಿದರೆ ಆಗ ನೀನು ನಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ಅವರು ಬದುಕಿರುವ ವರೆಗೂ ಅವರು ನಿನಗೆ ಭಯಪಡುವ ಹಾಗೆ,

೧ ಅರಸುಗಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी