ಆಗ ಮೋಶೆಯು ಯೊರ್ದನಿನ ಈಚೆಯಲ್ಲಿರುವ ಸೂರ್ಯೋದಯದ ಕಡೆಗೆ ಮೂರು ಪಟ್ಟಣಗಳನ್ನು ಪ್ರತ್ಯೇಕ ಮಾಡಿದನು.
39ಹೀಗಿರುವ ದರಿಂದ ಮೇಲಿನ ಆಕಾಶದಲ್ಲಿಯೂ ಕೆಳಗಿನ ಭೂಮಿ ಯಲ್ಲಿಯೂ ಕರ್ತನೇ ದೇವರೆಂದು ಮತ್ತೊಬ್ಬನಿಲ್ಲ ವೆಂದು ಈಹೊತ್ತು ತಿಳುಕೊಂಡು ಮನಸ್ಸಿಗೆ ತಂದು ಕೋ.
40ನಿನಗೂ ನಿನ್ನ ತರುವಾಯ ನಿನ್ನ ಮಕ್ಕಳಿಗೂ ಒಳ್ಳೇದಾಗುವ ಹಾಗೆಯೂ ನಿನ್ನ ದೇವರಾದ ಕರ್ತನು ನಿನಗೆ ಸದಾಕಾಲಕ್ಕೆ ಕೊಡುವ ಭೂಮಿಯ ಮೇಲೆ ನೀನು ಬಹಳ ದಿವಸವಿರುವ ಹಾಗೆಯೂ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಆತನ ನಿಯಮ ಗಳನ್ನೂ ಆಜ್ಞೆಗಳನ್ನೂ ಕಾಪಾಡು ಎಂದು ಹೇಳಿದನು.
41ಆಗ ಮೋಶೆಯು ಯೊರ್ದನಿನ ಈಚೆಯಲ್ಲಿರುವ ಸೂರ್ಯೋದಯದ ಕಡೆಗೆ ಮೂರು ಪಟ್ಟಣಗಳನ್ನು ಪ್ರತ್ಯೇಕ ಮಾಡಿದನು.
42ತಿಳಿಯದೆ, ಮುಂಚೆ ಹಗೆ ಮಾಡಿರದೆ, ತನ್ನ ನೆರೆಯವನನ್ನು ಕೊಂದುಹಾಕಿದ ಕೊಲೆಪಾತಕನು ಓಡಿಹೋಗುವ ಹಾಗೆ ಅವುಗಳನ್ನು ಬೇರೆ ಮಾಡಿದನು. ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕುವನು.
43ಅವು ಯಾವವಂದರೆ--ರೂಬೇನ್ಯರಿಗೆ ಅರಣ್ಯದ ಬೈಲಿನಲ್ಲಿ ಇರುವ ಬೇಚೆರ್, ಗಾದನವರಿಗೆ ಗಿಲ್ಯಾದಿನಲ್ಲಿರುವ ರಾಮೋತ್, ಮನಸ್ಸೆಯವರಿಗೆ ಬಾಷಾನಿನಲ್ಲಿರುವ ಗೋಲಾನ್.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ