ಧರ್ಮೋಪದೇಶಕಾಂಡ 12:8

ನಾವು ಈಗ ಇಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ದೃಷ್ಟಿಯಲ್ಲಿ ತೋರುವ ಪ್ರಕಾರ ಮಾಡುವಂತೆ ನೀವು ಮಾಡಬೇಡಿರಿ.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 12

6ಅಲ್ಲಿಗೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಬಲಿಗಳನ್ನೂ ನಿಮ್ಮ ಕೈಗಳು ಎತ್ತುವ ಅರ್ಪಣೆಗಳನ್ನೂ ನಿಮ್ಮ ದಶಮಾಂಶಗಳನ್ನೂ ನಿಮ್ಮ ಪ್ರಮಾಣಗಳನ್ನೂ ಉಚಿತವಾದ ಕಾಣಿಕೆಗಳನ್ನೂ ನಿಮ್ಮ ಪಶು ಕುರಿಗಳ ಚೊಚ್ಚಲಾದವುಗಳನ್ನೂ ತರಬೇಕು.

7ಅಲ್ಲಿ ನೀವು ನಿಮ್ಮ ದೇವರಾದ ಕರ್ತನ ಮುಂದೆ ತಿಂದು ನಿಮ್ಮ ಕುಟುಂಬಗಳ ಸಂಗಡ ನೀವು ನಿಮ್ಮ ದೇವರಾದ ಕರ್ತನು ನಿಮ್ಮನ್ನು ಆಶೀರ್ವದಿಸಿದ ಎಲ್ಲಾ ಕೈಕೆಲಸದಲ್ಲಿ ಸಂತೋಷಪಡಬೇಕು.

8ನಾವು ಈಗ ಇಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ದೃಷ್ಟಿಯಲ್ಲಿ ತೋರುವ ಪ್ರಕಾರ ಮಾಡುವಂತೆ ನೀವು ಮಾಡಬೇಡಿರಿ.

9ನಿಮ್ಮ ದೇವರಾದ ಕರ್ತನು ನಿಮಗೆ ಕೊಡುವ ವಿಶ್ರಾಂತಿಗೂ ಸ್ವಾಸ್ತ್ಯಕ್ಕೂ ನೀವು ಇನ್ನೂ ಸೇರಲಿಲ್ಲ;

10ಆದರೆ ನೀವು ಯೊರ್ದನನ್ನು ದಾಟಿದ ಮೇಲೆ ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ವಾಸಮಾಡುವಾಗ ಆತನು ಸುತ್ತಲಿ ರುವ ಎಲ್ಲಾ ಶತ್ರುಗಳಿಂದ ನಿಮ್ಮನ್ನು ತಪ್ಪಿಸಿ ನಿಮಗೆ ವಿಶ್ರಾಂತಿ ಕೊಟ್ಟ ಮೇಲೆ

ಧರ್ಮೋಪದೇಶಕಾಂಡ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी