ಕರ್ತನ ಆತ್ಮನು ನನ್ನಿಂದ ಮಾತನಾಡಿದನು; ಆತನ ವಾಕ್ಯವು ನನ್ನ ಬಾಯಿಯಲ್ಲಿತ್ತು.
1ದಾವೀದನ ಕಡೇ ಮಾತುಗಳು ಇವೇ--ಇಷಯನ ಮಗನಾದ ದಾವೀದನು ನುಡಿ ದನು; ಉನ್ನತವಾಗಿ ಏರಿಸಲ್ಪಟ್ಟ ಪುರುಷನು, ಯಾಕೋಬನ ದೇವರ ಅಭಿಷಕ್ತನು, ಇಸ್ರಾಯೇಲಿನ ರಮ್ಯವಾದ ಕೀರ್ತನೆಗಾರನು ನುಡಿದದ್ದೇನಂದರೆ--
2ಕರ್ತನ ಆತ್ಮನು ನನ್ನಿಂದ ಮಾತನಾಡಿದನು; ಆತನ ವಾಕ್ಯವು ನನ್ನ ಬಾಯಿಯಲ್ಲಿತ್ತು.
3ಇಸ್ರಾಯೇಲಿನ ದೇವರು ಹೇಳಿದ್ದು; ಇಸ್ರಾಯೇಲಿನ ಬಂಡೆ ನನ್ನ ಸಂಗಡ ಮಾತನಾಡಿದ್ದು--ಮನುಷ್ಯರ ಮೇಲೆ ಆಳುವ ವನು ನೀತಿವಂತನಾಗಿರತಕ್ಕದ್ದು; ಅವನು ದೇವರ ಭಯ ದಲ್ಲಿ ಆಳುವನು.
4ಸೂರ್ಯನು ಮೂಡಿರುವಂಥ, ಪ್ರಕಾಶದಿಂದ ಮೋಡಗಳಿಲ್ಲದೆ ಇರುವಂಥ, ಉದಯ ಕಾಲದ ಬೆಳಕಿನ ಹಾಗೆಯೂ ಮಳೆ ಬಂದ ಮೇಲೆ ಭೂಮಿಯಿಂದಾಗುವ ಹುಲ್ಲಿನ ಹಾಗೆಯೂ ಇರು ವನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ