೧ ಅರಸುಗಳು 20:19

ಪ್ರಾಂತಗಳ ಪ್ರಧಾನರ ಯೌವನಸ್ಥರೂ ಅವರ ಹಿಂದೆ ಬಂದ ಸೈನಿಕರೂ ಪಟ್ಟಣದಿಂದ ಹೊರಗೆ ಬಂದಾಗ ಪ್ರತಿ ಮನುಷ್ಯನು ತನಗೆ ಎದುರು ಬಿದ್ದವರನ್ನು ಕೊಂದುಹಾಕಿದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 20

17ಪ್ರಾಂತಗಳ ಪ್ರಧಾನರ ಸೇವಕರು ಮೊದಲು ಸೈನ್ಯವಾಗಿ ಹೊರಡುವಾಗ ಬೆನ್ಹದದನು ಮನುಷ್ಯರನ್ನು ಕಳುಹಿಸಿದನು. ಅವರು ತಿರಿಗಿ ಬಂದು --ಸಮಾರ್ಯದಿಂದ ಮನುಷ್ಯರು ಬಂದಿದ್ದಾರೆಂದು ಅವನಿಗೆ ತಿಳಿಸಿದರು.

18ಆಗ ಅವನು--ಅವರು ಸಮಾಧಾನಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ; ಯುದ್ಧಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ ಅಂದನು.

19ಪ್ರಾಂತಗಳ ಪ್ರಧಾನರ ಯೌವನಸ್ಥರೂ ಅವರ ಹಿಂದೆ ಬಂದ ಸೈನಿಕರೂ ಪಟ್ಟಣದಿಂದ ಹೊರಗೆ ಬಂದಾಗ ಪ್ರತಿ ಮನುಷ್ಯನು ತನಗೆ ಎದುರು ಬಿದ್ದವರನ್ನು ಕೊಂದುಹಾಕಿದನು.

20ಆಗ ಅರಾಮ್ಯರು ಓಡಿಹೋದರು; ಇಸ್ರಾಯೇಲ್ಯರು ಅವರನ್ನು ಹಿಂದಟ್ಟಿದರು; ಅರಾಮಿನ ಅರಸನಾದ ಬೆನ್ಹದದನು ಕುದುರೆ ಹತ್ತಿಕೊಂಡು ಕುದುರೆ ರಾಹುತರ ಸಂಗಡ ತಪ್ಪಿಸಿಕೊಂಡನು.

21ಇದಲ್ಲದೆ ಇಸ್ರಾಯೇಲಿನ ಅರಸನು ಹೊರಟು ಕುದುರೆಗಳನ್ನೂ ರಥಗಳನ್ನೂ ಹೊಡೆದು ರಾಮ್ಯರನ್ನು ಮಹಾ ಸಂಹಾರದಿಂದ ಹೊಡೆದುಬಿಟ್ಟನು.

೧ ಅರಸುಗಳು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी