ನ್ಯಾಯಸ್ಥಾಪಕರು 11:9

ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ ಅಮ್ಮೋನನ ಮಕ್ಕಳಿಗೆ ವಿರೋ ಧವಾಗಿ ಯುದ್ಧಮಾಡುವದಕ್ಕೆ ನೀವು ತಿರಿಗಿ ನನ್ನನ್ನು ಮನೆಗೆ ಕರತಂದರೆ ಮತ್ತು ಕರ್ತನು ಅವರನ್ನು ನನ್ನ ಮುಂದೆ ಒಪ್ಪಿಸಿಕೊಟ್ಟರೆ ನಾನು ನಿಮಗೆ ನಾಯಕ ನಾಗಿರುವೆನೋ ಅನ್ನಲು

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 11

7ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ--ನನ್ನನ್ನು ಹಗೆಮಾಡಿ ನನ್ನ ತಂದೆಯ ಮನೆಯಿಂದ ಹೊರಡಿಸಿದವರು ನೀವ ಲ್ಲವೋ? ಈಗ ನಿಮಗೆ ಇಕ್ಕಟ್ಟು ಬಂದಿರುವಾಗ ನನ್ನ ಬಳಿಗೆ ಯಾಕೆ ಬಂದಿರಿ ಅಂದನು.

8ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ--ನೀನು ನಮ್ಮೊಂದಿಗೆ ಬಂದು ಅಮ್ಮೋನನ ಮಕ್ಕಳಿಗೆ ವಿರೋಧವಾಗಿ ಯುದ್ಧಮಾಡಿ ಗಿಲ್ಯಾದಿನ ನಿವಾಸಿಗಳಾದ ನಮ್ಮೆಲ್ಲರಿಗೆ ನೀನು ತಲೆಯಾಗಿರುವ ಹಾಗೆ ಈಗ ನಿನ್ನ ಬಳಿಗೆ ತಿರಿಗಿ ಬಂದೆವು ಅಂದರು.

9ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ ಅಮ್ಮೋನನ ಮಕ್ಕಳಿಗೆ ವಿರೋ ಧವಾಗಿ ಯುದ್ಧಮಾಡುವದಕ್ಕೆ ನೀವು ತಿರಿಗಿ ನನ್ನನ್ನು ಮನೆಗೆ ಕರತಂದರೆ ಮತ್ತು ಕರ್ತನು ಅವರನ್ನು ನನ್ನ ಮುಂದೆ ಒಪ್ಪಿಸಿಕೊಟ್ಟರೆ ನಾನು ನಿಮಗೆ ನಾಯಕ ನಾಗಿರುವೆನೋ ಅನ್ನಲು

10ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ--ನಾವು ಈ ನಿನ್ನ ಮಾತಿನ ಹಾಗೆಯೇ ಮಾಡದೆ ಹೋದರೆ ಕರ್ತನು ನಮ್ಮ ಮತ್ತು ನಿನ್ನ ಮಧ್ಯದಲ್ಲಿ ಸಾಕ್ಷಿಯಾಗಿರಲಿ ಅಂದರು.

11ಆಗ ಯೆಫ್ತಾ ಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಆಗ ಜನರು ಅವನನ್ನು ತಮ್ಮ ಮೇಲೆ ನಾಯಕನ ನ್ನಾಗಿಯೂ ಅಧಿಪತಿಯನ್ನಾಗಿಯೂ ಇಟ್ಟುಕೊಂಡರು. ಯೆಫ್ತಾಹನು ತನ್ನ ಮಾತುಗಳನ್ನೆಲ್ಲಾ ಮಿಚ್ಪೆಯಲ್ಲಿ ಕರ್ತನ ಮುಂದೆ ಹೇಳಿದನು.

ನ್ಯಾಯಸ್ಥಾಪಕರು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी