ಎಸ್ತೇರಳು 4:9

ಆಗ ಹತಾಕನು ಬಂದು ಮೊರ್ದೆಕೈಯ ಮಾತು ಗಳನ್ನು ಎಸ್ತೇರಳಿಗೆ ತಿಳಿಸಿದನು.

ಸಂದರ್ಭದೊಂದಿಗೆ ಓದಿ · ಎಸ್ತೇರಳು 4

7ಆಗ ಮೊರ್ದೆಕೈ ತನಗೆ ಆದದ್ದನ್ನೂ ಹಾಮಾನನು ಯೆಹೂದ್ಯರನ್ನು ನಾಶಮಾಡುವ ನಿಮಿತ್ತ ಅರಸನ ಬೊಕ್ಕಸಕ್ಕೆ ಕೊಡಲು ವಾಗ್ದಾನಮಾಡಿಕೊಂಡ ಹಣ ವನ್ನೂ ಅವನಿಗೆ ತಿಳಿಸಿದನು.

8ಯೆಹೂದ್ಯರನ್ನು ನಾಶ ಮಾಡಲು ಶೂಷನಿನಲ್ಲಿ ಕೊಡಲ್ಪಟ್ಟ ಆಜ್ಞಾಪತ್ರದ ಪ್ರತಿಯನ್ನು ಅವನ ಕೈಯಲ್ಲಿ ಕೊಟ್ಟು ಅದನ್ನು ಎಸ್ತೇರ ಳಿಗೆ ತೋರಿಸಿ ತಿಳಿಸುವದಕ್ಕೂ ಅವಳು ತನ್ನ ಜನ ಕ್ಕೋಸ್ಕರ ಅರಸನ ಮುಂದೆ ಬಿನ್ನಹಮಾಡಿ ಬೇಡಿ ಕೊಳ್ಳುವದಕ್ಕೂ ಅವನ ಬಳಿಗೆ ಹೋಗಬೇಕೆಂದು ಅವಳಿಗೆ ಆಜ್ಞಾಪಿಸಲು ಹೇಳಿದನು.

9ಆಗ ಹತಾಕನು ಬಂದು ಮೊರ್ದೆಕೈಯ ಮಾತು ಗಳನ್ನು ಎಸ್ತೇರಳಿಗೆ ತಿಳಿಸಿದನು.

10ಎಸ್ತೇರಳು ಮೊರ್ದೆ ಕೈಗೆ ಹೇಳಲು ಹತಾಕನಿಗೆ ಆಜ್ಞಾಪಿಸಿದ್ದೇನಂದರೆ--

11ಕರಿಸಲ್ಪಡದೆ ಅರಸನ ಬಳಿಗೆ ಒಳಮನೆಯಲ್ಲಿ ಪ್ರವೇಶಿಸುವ ಯಾವನಾದರೂ ಗಂಡಸಾದರೂ ಸರಿ ಹೆಂಗಸಾದರೂ ಸರಿ ಬದುಕುವ ಹಾಗೆ ಅರಸನು ಬಂಗಾರದ ಮುದ್ರೆ ಕೋಲನ್ನು ಅವನ ಬಳಿಗೆ ಚಾಚಿ ದರೆ ಹೊರತು ಅವನನ್ನು ಕೊಲ್ಲಬೇಕೆಂಬ ಅವನ ಆಜ್ಞೆ ಒಂದೇ ಉಂಟೆಂದು ಅರಸನ ಸಮಸ್ತ ಸೇವ ಕರೂ ಅರಸನ ಪ್ರಾಂತ್ಯಗಳ ಜನರೂ ತಿಳಿದಿದ್ದಾರೆ. ಆದರೆ ನಾನು ಈ ಮೂವತ್ತು ದಿವಸಗಳಿಂದ ಅರಸನ ಬಳಿಗೆ ಕರೆಯಲ್ಪಡಲಿಲ್ಲ ಎಂದು ಅಂದಾಗ

ಎಸ್ತೇರಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी